ತಮ್ಮ ಇಡೀ ಜೀವಮಾನದಲ್ಲಿಯೇ ಒಂದು ಬಾರಿಯೂ ಮದ್ಯಪಾನ ಮಾಡದ ಭಾರತದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!
ಪಾರ್ಟಿಗಳ ಸಮಯದಲ್ಲಿ ಡ್ರಿಂಕ್ಸ್ ಕುಡಿದು ಎಂಜಾಯ್ ಮಾಡುವುದು ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯ. ಇನ್ನು ಈ ಅಭ್ಯಾಸ ಟೀಂ ಇಂಡಿಯಾದಲ್ಲೂ ಇದೆ
ಇದು ಹಳೆಯ ಸಂಸ್ಕೃತಿಯಾಗಿದೆ. ಆದರೆ ಅಂತಹ ಕ್ರಿಕೆಟಿಗರ ಮಧ್ಯೆ ಒಂದು ತೊಟ್ಟು ಸಹ ಆಲ್ಕೋಹಾಲ್ ಕುಡಿಯದ ಕ್ರಿಕೆಟಿಗರು ಸಹ ಇದ್ದಾರೆ. ಅವರು ಯಾರೆಂಬುದನ್ನು ತಿಳಿದುಕೊಳ್ಳೋಣ.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪ್ರಸ್ತುತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಭಾರತ ತಂಡಕ್ಕಾಗಿ ಒಟ್ಟು 21 ಟೆಸ್ಟ್ ಪಂದ್ಯ, 121 ODI ಪಂದ್ಯ ಮತ್ತು 66 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಂದಹಾಗೆ ಇವರು ತಮ್ಮ ಇಡೀ ಜೀವಮಾನದಲ್ಲಿ ಒಂದು ಬಾರಿಯೂ ಮಧ್ಯಪಾನವಾಗಲಿ, ಧೂಮಪಾನವನ್ನಾಗಲಿ ಮಾಡಿಲ್ಲ.
ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ʼಗಳಲ್ಲಿ ಒಬ್ಬರಾಗಿದ್ದಲ್ಲದೆ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಕೋಚ್ ಕೂಡ ಹೌದು. starsunfolded.com ವರದಿಯ ಪ್ರಕಾರ, ರಾಹುಲ್ ದ್ರಾವಿಡ್ ಎಂದಿಗೂ ಧೂಮಪಾನ ಮತ್ತು ಮದ್ಯಪಾನವನ್ನು ಮಾಡಿಲ್ಲ.
ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಕೂಡ ಮಾದಕ ವ್ಯಸನದಿಂದ ದೂರ ಉಳಿದಿದ್ದಾರೆ. starsunfolded.com ವರದಿಯ ಪ್ರಕಾರ, ಗೌತಮ್ ಗಂಭೀರ್ ಕೂಡ ಧೂಮಪಾನ ಮತ್ತು ಮದ್ಯಪಾನ ಮಾಡುವುದಿಲ್ಲ.
ದೇಶೀಯ ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕರಾಗಿದ್ದ ಪರ್ವೇಜ್ ರಸೂಲ್ ಕೂಡ ಭಾರತ ತಂಡದ ಪರ ಆಡಿದ್ದಾರೆ. ಇವರು ಕೂಡ ತಮ್ಮ ಇಡೀ ವೃತ್ತಿಜೀವನದಲ್ಲಿ ಆಲ್ಕೋಹಾಲ್ ಮುಟ್ಟಿಯೂ ನೋಡಿಲ್ಲ.