ಕ್ಯಾನ್ಸರ್ ರೋಗಿಗಳಿಗೆ ಇನ್ಮುಂದೆ ಉಚಿತ ಲಸಿಕೆ...ಇಲ್ಲಿದೆ ಮೆಗಾ ಅಪ್ಡೇಟ್...!
ರಷ್ಯಾದ ಆರೋಗ್ಯ ಸಚಿವಾಲಯವು ಹೊಸ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.ಈ ಲಸಿಕೆಯು 2025 ರ ವೇಳೆಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ವಿಶೇಷವೆಂದರೆ ರಷ್ಯಾ ಈ ಹೊಸ ಕ್ಯಾನ್ಸರ್ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಲಿದೆ.ಈ ಲಸಿಕೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ ಎನ್ನಲಾಗುತ್ತಿದ್ದು, ಹಾಗಾಗಿ ಈ ಲಸಿಕೆಯ ಮೇಲೆ ಜಗತ್ತಿನ ಎಲ್ಲ ರಾಷ್ಟ್ರಗಳ ಕಣ್ಣು ನೆಟ್ಟಿದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ರಷ್ಯಾ ತನ್ನದೇ ಆದ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯು 2025 ರ ಹೊತ್ತಿಗೆ ಮಾರುಕಟ್ಟೆಗೆ ಬರಬಹುದು.ಪ್ರಸ್ತುತ ಲಸಿಕೆಯ ಪ್ರಿ-ಕ್ಲಿನಿಕಲ್ ಪರೀಕ್ಷೆಯು ನಡೆಯುತ್ತಿದ್ದು, ಯಶಸ್ವಿ ಪರೀಕ್ಷೆಗಳ ನಂತರ, ರಷ್ಯಾ ಲಸಿಕೆಯನ್ನು ವಿಶ್ವಾದ್ಯಂತ ವಿತರಿಸಬಹುದು ಎನ್ನಲಾಗಿದೆ.
ಈ ಲಸಿಕೆ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡುತ್ತಾ 'ನಾವು ಕ್ಯಾನ್ಸರ್ ಲಸಿಕೆ ತಯಾರಿಸಲು ತುಂಬಾ ಹತ್ತಿರವಾಗಿದ್ದೇವೆ ಎಂದು ಅವರು ಈ ವರ್ಷದ ಫೆಬ್ರವರಿಯಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.ಆದಾಗ್ಯೂ, ರಷ್ಯಾದ ಲಸಿಕೆ ಯಾವ ರೀತಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡುತ್ತದೆ ಎಂಬುದು ಇನ್ನೂ ತಿಳಿದಿಲ್ಲ.
ವಿಶ್ವಾದ್ಯಂತ 50 ರಷ್ಟು ಕ್ಯಾನ್ಸರ್ ರೋಗಿಗಳು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಿಂದ ಸಾಯುತ್ತಾರೆ.ಅದರಲ್ಲೂ ಮೂರನೇ ಹಂತದ ಕ್ಯಾನ್ಸರ್ ನಿರ್ದಿಷ್ಟವಾಗಿ ಹೋರಾಡಲು ಅಸಾಧ್ಯವಾಗಿದೆ. ಹೀಗಿರುವಾಗ ಕ್ಯಾನ್ಸರ್ ಪೀಡಿತರಿಗೆ ರಷ್ಯಾ ಗುಡ್ ನ್ಯೂಸ್ ನೀಡಿದೆ.