Anil Kumble ಇಂದ ರಿಕಿ ಪಾಂಟಿಂಗ್‌ರವರೆಗೆ ಐಪಿಎಲ್‌ನ ಈ `ಗುರುಗಳ` ಸಂಬಳ ಎಷ್ಟೆಂದು ತಿಳಿದರೆ ಶಾಕ್ ಆಗ್ತೀರ

Sat, 12 Jun 2021-8:45 am,

ಪಂಜಾಬ್ ಕಿಂಗ್ಸ್ (Punjab Kings) ಮುಖ್ಯ ಕೋಚ್ ಅನಿಲ್ ಕುಂಬ್ಳೆ (Anil Kumble) ಪ್ರತಿ ಕ್ರೀಡಾ ಋತುವಿನಲ್ಲಿ 4 ಕೋಟಿ ರೂ. ಪಡೆಯುತ್ತಾರೆ. ಈ ತಂಡವು ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ (Ricky Ponting) ದೆಹಲಿ ಕ್ಯಾಪಿಟಲ್ಸ್‌ನ ಕೋಚ್. ರಿಕಿ ಪಾಂಟಿಂಗ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತರಬೇತುದಾರರಲ್ಲಿ ಒಬ್ಬರು. ಪಾಂಟಿಂಗ್ ಅವರ ಸೇವೆಗಳಿಗಾಗಿ ದೆಹಲಿ ಕ್ಯಾಪಿಟಲ್ಸ್ ನಿಂದ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಶಾರುಖ್ ಖಾನ್ ಅವರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ನ್ಯೂಜಿಲೆಂಡ್ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್. ಕೆಕೆಆರ್ ತಮ್ಮ ಸೇವೆಗಳಿಗಾಗಿ ಮೆಕಲಮ್ಗೆ 3.4 ಕೋಟಿ ರೂ. ಸಂಭಾವನೆ ನೀಡುತ್ತಾರೆ. ಕೆಕೆಆರ್ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ.   ಇದನ್ನೂ ಓದಿ- ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಸಿದ್ಧತೆಯಲ್ಲಿದೆಯೇ ಭಾರತದ ಈ ನಗರಿ ?

ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಈ ತಂಡದ ಮುಖ್ಯ ತರಬೇತುದಾರ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಮಹೇಲಾ ಜಯವರ್ಧನೆ. ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ ಅವರಿಗೆ 2.30 ಕೋಟಿ ಸಂಬಳ ನೀಡುತ್ತದೆ.

ಇದನ್ನೂ ಓದಿ- ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಿಂಗ್ಸರ್ ಡಿಂಗ್ಕೊ ಸಿಂಗ್ ಸಾವು

ಸೈಮನ್ ಕಟಿಚ್ ವಿರಾಟ್ ಕೊಹ್ಲಿ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖ್ಯ ಕೋಚ್. ಆರ್‌ಸಿಬಿಯಿಂದ ಪ್ರತಿ ಕ್ರೀಡಾ ಋತುವಿನಲ್ಲಿ ಇವರಿಗೆ 4 ಕೋಟಿ ರೂ. ಸಂಭಾವನೆ ನೀಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link