ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ (Michael Vaughan) ಅವರು ಭಾರತ ಕ್ರಿಕೆಟ್ ತಂಡದ (Team India) ನಾಯಕರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ನಾಯಕತ್ವವನ್ನು ಹೋಲಿಸಿ ದೊಡ್ಡ ಹೇಳಿಕೆ ನೀಡಿದ್ದಾರೆ. ಮೈಕೆಲ್ ವಾಘನ್, ಮಹೇಂದ್ರ ಸಿಂಗ್ ಧೋನಿ (Mahendra Sing Dhoni) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ ಪ್ರತಿಭಾವಂತ ನಾಯಕ ಯಾರು ಎಂಬುದನ್ನು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಮತ್ತು ಅದರ ಆಟಗಾರರ ವಿರುದ್ಧದ ತೀಕ್ಷ್ಣವಾದ ಟೀಕೆಗಳಿಗೆ ಮೈಕೆಲ್ ವಾಘನ್ ಆಗಾಗ ಹೆಸರುವಾಸಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಮತ್ತೊಂದು ಸಂಗತಿ ಬಗ್ಗೆ ಮಾತನಾಡಿದ್ದಾರೆ.
ಮೈಕೆಲ್ ವಾಘನ್ ಪ್ರಕಾರ ಉತ್ತಮ ನಾಯಕ ಯಾರು?
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ (Michael Vaughan) ಅವರು, 'ಮಹೇಂದ್ರ ಸಿಂಗ್ ಧೋನಿ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಹೊಸತನ ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುತ್ತಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಧೋನಿ ಅತ್ಯುತ್ತಮ ನಾಯಕ. ಮಹೇಂದ್ರ ಸಿಂಗ್ ಧೋನಿ (Mahendra Sing Dhoni) ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಏನು ಮಾಡಿದ್ದಾರೆ ಎಂಬುದು ಅದ್ಭುತವಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ - Virat Kohli, Anushka Sharma ಅವರ ಐಷಾರಾಮಿ ಮನೆಯ INSIDE ಫೋಟೋಸ್
ಪ್ರತಿ ವಿಷಯದಲ್ಲೂ ಧೋನಿ ಪ್ರತಿಭೆ:
ಟೆಸ್ಟ್ ಕ್ರಿಕೆಟ್ (Test Cricket) ನಾಯಕತ್ವದ ವಿಷಯದಲ್ಲಿ ಮೈಕೆಲ್ ವಾಘನ್ ಅವರು ವಿರಾಟ್ ಕೊಹ್ಲಿಯನ್ನು ಉತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. 'ವಿರಾಟ್ ಕೊಹ್ಲಿ (Virat Kohli) ಅವರನ್ನು ನಾನು ಟೆಸ್ಟ್ ಕ್ರಿಕೆಟ್ ನಾಯಕತ್ವದ ವಿಷಯದಲ್ಲಿ ಉತ್ತಮ ಎಂದು ಹೇಳುತ್ತೇನೆ. ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ, ಆದ್ದರಿಂದ ನಾನು ಅವರನ್ನು ಕೆಂಪು ಚೆಂಡು ಕ್ರಿಕೆಟ್‌ನಲ್ಲಿ ಧೋನಿಗಿಂತ ಹೆಚ್ಚು ಇಷ್ಟಪಡುತ್ತೇನೆ. ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಧೋನಿ ನನಗೆ ಉತ್ತಮ ನಾಯಕ. ನಾನು ಎಲ್ಲಾ ರೀತಿಯ ಕ್ರಿಕೆಟ್‌ನಲ್ಲಿ ನಾಯಕನನ್ನು ಆರಿಸಬೇಕಾದರೆ, ಆಗ ನಾನು ಧೋನಿಯ ಹೆಸರನ್ನು ಒತ್ತಿ ಹೇಳುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ - ಲಿಯೊನೆಲ್ ಮೆಸ್ಸಿಯ ಅಂತರಾಷ್ಟ್ರೀಯ ಫುಟ್ಬಾಲ್ ದಾಖಲೆ ಅಳಿಸಿ ಹಾಕಿದ ಈ ಭಾರತೀಯ ಆಟಗಾರ..!
ಬಿಡುವಿನ ವೇಳೆಯಲ್ಲಿ ಧೋನಿ :
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈ ದಿನಗಳಲ್ಲಿ ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ವಿರಾಮದ ಸಮಯವನ್ನು ಕಳೆಯುತ್ತಿದ್ದಾರೆ. ಧೋನಿ ಫಾರ್ಮ್ ಹೌಸಿನಲ್ಲಿ ಕುದುರೆಗಳನ್ನು ಸಾಕುತ್ತಿದ್ದಾರೆ. ಇತ್ತೀಚೆಗೆ ಧೋನಿ ಸ್ಕಾಟ್ಲೆಂಡ್‌ನಿಂದ ಬಹಳ ವಿಶೇಷವಾದ ಕುದುರೆಯನ್ನು ತರಿಸಿದ್ದಾರೆ. ಅವರಿಗೆ ಸ್ಕಾಟ್ಲೆಂಡ್‌ನಿಂದ ಶೆಟ್ಲ್ಯಾಂಡ್ ಕುದುರೆ ತಳಿಯ ಸುಂದರವಾದ ಬಿಳಿ ಬಣ್ಣದ ಕುದುರೆ ಸಿಕ್ಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.