ಮಕರ ಸಂಕ್ರಾತಿಯಿಂದ ಈ ರಾಶಿಯವರಿಗಿರುವುದಿಲ್ಲ ಧನ ಸಂಪತ್ತಿನ ಕೊರತೆ !ಏರುತ್ತಲೇ ಹೋಗುವರು ಯಶಸ್ಸಿನ ಏಣಿ

Mon, 08 Jan 2024-8:05 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಸೂರ್ಯ ಸಂಕ್ರಮಣ ಅಥವಾ ಮಕರ ಸಂಕ್ರಾಂತಿಯು 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ.ಸೂರ್ಯ ಈ ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭವನ್ನು ತಂದು ಕೊಡಲಿದ್ದಾನೆ.  

ಮೇಷ ರಾಶಿ : ಮೇಷ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ.ಈ ರಾಶಿಯವರು ಆಸ್ತಿಯಿಂದ ಲಾಭ ಪಡೆಯುತ್ತಾರೆ.ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಕೆಲಸ ಅಥವಾ ವರ್ಗಾವಣೆ-ಬಡ್ತಿ ಪಡೆಯುವ ಆಸೆ ಈಡೇರಬಹುದು.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.   

ಮಿಥುನ ರಾಶಿ : ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.ಇಂತವರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ. ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.ಆರ್ಥಿಕ ಲಾಭ ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಹಿರಿಯರಿಂದ ಬೆಂಬಲ ದೊರೆಯಲಿದೆ. ಮನೆಯಲ್ಲೂ ಉತ್ತಮ ವಾತಾವರಣ ಇರುತ್ತದೆ. 

ಕನ್ಯಾ ರಾಶಿ :ಸೂರ್ಯನ ಸಂಚಾರವು ಕನ್ಯಾ ರಾಶಿಯ ಜನರಿಗೆ ಪ್ರಗತಿಯನ್ನು ತರುತ್ತದೆ. ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆದಾಯವು ಹೆಚ್ಚಾಗುತ್ತದೆ. ಮಾತ್ರವಲ್ಲ ಉಳಿತಾಯ ಮಾಡುವಲ್ಲಿಯೂ ಯಶಸ್ವಿಯಾಗುತ್ತೀರಿ.   

ಧನು ರಾಶಿ : ನಿಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ಕಾರಣದಿಂದಾಗಿ ನೀವು ಒಂದರ ನಂತರ ಒಂದರಂತೆ ಯಶಸ್ಸನ್ನು ಸಾಧಿಸುವಿರಿ.ಹಣ ಗಳಿಸಲು ಅನುಕೂಲಕರ ಅವಕಾಶಗಳಿವೆ. ನಿಮ್ಮ ಆದಾಯದಲ್ಲಿ ಶಾಶ್ವತವಾಗಿ ಹೆಚ್ಚಳ ಕಂಡು ಬರುವುದು. ಕೆಲಸ ಮಾಡುವವರಿಗೆ ಬಡ್ತಿ ಅಥವಾ ಹೊಸ ಉದ್ಯೋಗಾವಕಾಶ ದೊರೆಯಬಹುದು. ದಾಂಪತ್ಯ ಸುಖಮಾಯವಾಗಿರುವುದು. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link