ಅಕ್ಟೋಬರ್ 19 ರಿಂದ ಈ ಜನರ ಬಾಳಲ್ಲಿ ಸುದಿನಗಳ ಸುಗ್ಗಿ, ಧನಲಕ್ಷ್ಮಿ ಕೃಪೆಯಿಂದ ಜೀವನದಲ್ಲಿ ಕನಕವೃಷ್ಟಿ!
Mercury Transit In Libra: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಶೀಘ್ರದಲ್ಲೇ ತನ್ನ ಸ್ವರಾಶಿಯಾಗಿರುವ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಸ್ವರಾಶಿ ಗೋಚರ 3 ರಾಶಿಗಳ ಜನರ ಜೀವನದಲ್ಲಿ ಧನ-ಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಲಿದೆ (Spiritual News In Kannada)
ಮೇಷ ರಾಶಿ: ಈ ಅವಧಿಯಲ್ಲಿ ಬುಧ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಬುಧನ ಈ ಸಂಕ್ರಮಣ ನಿಮ್ಮ ಪಾಲಿಗೆ ಅತ್ಯಂತ ಶುಭವಾಗಿರಲಿದೆ. ನಿಮ್ಮ ವೈವಾಹಿಕ ಜೀವನ ಸಾಕಷ್ಟು ಖುಷಿಗಳಿಂದ ತುಂಬಿರಲಿದೆ. ಈ ಅವಧಿಯಲ್ಲಿ ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವವರಿಗೆ ಈ ಸಮಯ ಅತ್ಯಂತ ಲಾಭದಾಯಕವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಇರಲಿದೆ. ವ್ಯಾಪಾರದಲ್ಲಿ ಬಾಳಸಂಗಾತಿಯ ಸಲಹೆ ಪಡೆದುಕೊಂಡು ಕೆಲಸ ಮಾಡಿದರೆ ನಿಮಗೆ ಅಪಾರ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ಈ ಅವಧಿಯಲ್ಲಿ ಬುಧ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮಗೆ ಸಿಗಬೇಕಾದ ಮತ್ತು ದೀರ್ಘ ಕಾಲದಿಂದ ಸಿಲುಕಿಬಿದ್ದ ದೊಡ್ಡ ಪೆಮೆಂಟ್ ನಿಮ್ಮ ಕೈಸೇರಲಿದೆ. ಈ ಅವಧಿಯಲ್ಲಿ ನಿಮಗೆ ಪ್ರೇಮ ಸಂಬಂಧಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ಅರ್ಥಾತ್ ನಿಮ್ಮ ಪ್ರೇಮ, ಮದುವೆಯ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ವಿವಾಹಿತರಿಗೆ ಸಂತಾನ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಷೇರುಪೇಟೆ. ಲಾಟರಿಗಳಂತಹ ವ್ಯವಹಾರಗಳಲ್ಲಿ ನಿಮಗೆ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಬುಧನ ಸ್ವರಾಶಿ ಗೋಚರ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಬುಧ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಸಾಹಸ-ಪರಾಕ್ರಮದಲ್ಲಿ ಅಪಾರ ವೃದ್ಧಿಯನ್ನು ನೀವು ಗಮನಿಸಬಹುದು. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಹೊಂದಿದವರಿಗೆ ಅಪಾರ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಧನಲಾಭದ ಜೊತೆಗೆ ಕಾರ್ಯಕ್ಷೇತ್ರದಲ್ಲಿಯೂ ಕೂಡ ಉನ್ನತಿಯ ಯೋಗಗಳು ಕಂಡುಬರುತ್ತಿವೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ಹೊಸ ಸಂಗತಿಗಳ ಆರಂಭಕ್ಕೆ ಈ ಸಮಯ ತುಂಬಾ ಉತ್ತಮವಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)