ಅಕ್ಟೋಬರ್ ನಿಂದ ಮುಂದಿನ ಎರಡು ವರ್ಷಗಳವರೆಗೆ ಈ ರಾಶಿಯವರದ್ದೇ ಆಟ ! ಬಾಳಲ್ಲಿ ಉಕ್ಕಿ ಬರುವುದು ಧನ ಸಂಪತ್ತು

Tue, 18 Jul 2023-8:42 am,

 ರಾಹು ಮತ್ತು ಕೇತು ಅನಿಷ್ಟ ಗ್ರಹಗಳಾಗಿದ್ದು, ಅಶುಭವನ್ನೇ ನೀಡುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇದು ನಿಜವಲ್ಲ. ಜಾತಕದಲ್ಲಿ ಕೇತುವಿನ ಸ್ಥಾನವು ಉತ್ತಮವಾಗಿದ್ದರೆ, ಕೇತು ಕೂಡಾ ಉತ್ತಮ ಫಲವನ್ನೇ ಕರುಣಿಸುತ್ತಾನೆ. ಆದರೆ, ಕೇತುವಿನ ಸ್ಥಾನವು ಕೆಟ್ಟದಾಗಿದ್ದರೆ, ಕಷ್ಟಗಳು ಒಂದರ ಹಿಂದೆ ಒಂದರಂತೆ ಹಿಂಸೆ ನೀಡುತ್ತವೆ.   

ಕೇತು 30 ಅಕ್ಟೋಬರ್ 2023 ರಂದು ಸಂಕ್ರಮಿಸಲಿದ್ದಾನೆ. ಅಕ್ಟೋಬರ್ 30 ರಂದು, ತುಲಾ ರಾಶಿಯನ್ನು ಬಿಟ್ಟು, ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕೇತು ಕನ್ಯಾರಾಶಿಗೆ ಪ್ರವೇಶಿಸಿದ ತಕ್ಷಣ, ಅನೇಕ ರಾಶಿಯವರ ಅದೃಷ್ಟ ಬೆಳಗುತ್ತದೆ. ಅವರು ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಮೇಷ ರಾಶಿ : ಕೇತುವಿನ ಸಂಚಾರವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ನಡೆಯಲಿದೆ. ಅಕ್ಟೋಬರ್ 30 ರಂದು ಕೇತು ಸಂಕ್ರಮಣದ ನಂತರ, ನಿಮ್ಮ ವೈವಾಹಿಕ ಜೀವನದಲ್ಲಿ ಮಾಧುರ್ಯ ಇರುತ್ತದೆ. ಶತ್ರುಗಳ ಮೇಲೆ ನೀವು ವಿಜಯ ಸಾಧಿಸುತ್ತೀರಿ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುವಿರಿ. ಕೇತುವಿನ ಅನುಗ್ರಹದಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ಈ ಸಮಯದಲ್ಲಿ, ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು.  

ಕರ್ಕಾಟಕ ರಾಶಿ : ಕರ್ಕಾಟಕದಿಂದ ಮೂರನೇ ಮನೆಯಲ್ಲಿ ಕೇತುವಿನ ಸಂಚಾರವಿರುತ್ತದೆ. ಈ ಮನೆಯು ಸಂವಹನ, ಬರವಣಿಗೆ, ಸಹೋದರರು, ಧೈರ್ಯ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ್ದಾಗಿದೆ. ಕೇತುವಿನ ದೃಷ್ಟಿ  ನಿಮ್ಮ ಏಳನೇ, ಒಂಬತ್ತನೇ ಮತ್ತು ಹನ್ನೊಂದನೇ ಮನೆಯ ಮೇಲೆ ಇರುತ್ತದೆ. ಕೇತು ಸಂಕ್ರಮಿಸಿದ ತಕ್ಷಣ ಸಹೋದರರೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಹಣ ಮತ್ತು ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳು ಕೊನೆಗೊಳ್ಳುತ್ತವೆ. ಈ ಸಮಯದಲ್ಲಿ ನೀವು ಕೆಲವು ಧಾರ್ಮಿಕ ಪ್ರಯಾಣದ ಭಾಗವಾಗಿರುತ್ತೀರಿ. ಕೇತುವಿನ ಅನುಗ್ರಹದಿಂದ ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಿ, ಅದರಲ್ಲಿ ಯಶಸ್ಸು ಪಡೆಯುತ್ತೀರಿ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯಿಂದ ಕೇತುವಿನ ಸಂಚಾರವು ಹನ್ನೊಂದನೇ ಮನೆಯಲ್ಲಿ ನಡೆಯಲಿದ್ದು, ಇದು ಸ್ನೇಹಿತರು ಮತ್ತು ಸಂಪತ್ತಿಗೆ ಸಂಬಂಧಿಸಿದ್ದಾಗಿದೆ. ಈ ಮನೆಯಲ್ಲಿ ಕುಳಿತರೆ ಕೇತುವಿನ ದೃಷ್ಟಿ ಮೂರನೇ, ಐದನೇ ಮತ್ತು ಏಳನೇ ಮನೆಯ ಮೇಲೆ ಇರುತ್ತದೆ. ಹನ್ನೊಂದನೇ ಮನೆಯಲ್ಲಿ ಕೇತುವಿನ ಸಂಚಾರವು ವೃಶ್ಚಿಕ ರಾಶಿಯ ಜನರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಬಹುಕಾಲದಿಂದ ನೀವು ಮಾಡಬೇಕು ಎಂದುಕೊಂಡಿರುವ ಕೆಲಸಗಳು ಈ ಸಮಯದಲ್ಲಿ ಕೈ  ಗೂ ಡುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link