ಭಯಾನಕ ಖಳನಾಯಕ..61 ನೇ ವಯಸ್ಸಿನಲ್ಲಿ ಎರಡನೇ ಮಾದುವೆ, ತನಗಿಂತ 7 ವರ್ಷ ಚಿಕ್ಕವಳ ಜೊತೆ ಡೇಟಿಂಗ್‌..!ಈ ನಟ ಯಾರು ಗೊತ್ತಾ..?

Mon, 22 Jul 2024-8:39 am,

ಬಾಲಿವುಡ್‌ ಚಿತ್ರರಂಗದ ಇತಿಹಾಸದಲ್ಲಿ ಅನೇಕ ಖಳನಾಯಕರು ಬಂದು ಹೋಗಿದ್ದಾರೆ, ಆದರೆ ಎಷ್ಟೇ ವಿಲನ್‌ಗಳು ಬಂದು ಹೋದರು ಕೇವಲ ಕೆಲವು ವಿಲನ್‌ಗಳನ್ನು ನೋಡಿದಾಗ ಮಾತ್ರ ಗೂಸ್‌ಬಂಪ್ಸ್‌ ಬರುತ್ತದೆ, ನಿಜವಾಗಿಯೂ ಅವರು ತೆರೆಯ ಮೇಲೆ ವಿಲನ್‌ಗಳಂತೆ ಕಾಡುತ್ತಾರೆ.  

ತಮ್ಮ ಖಳನಟನ ಮೂಲಕ ದೊಡ್ಡ ನಟರ ಬೆವರಿಳಿಸುವಂತೆ ಮಾಡಿದ್ದ, ಈ ನಟ ತಮ್ಮ ಸಿನಿಮಾಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲೂ ಭಾರಿ ಸದ್ದು ಮಾಡುತ್ತಿದ್ದಾರೆ. ಯಾರು ಆ ನಟ ತಿಳಿಯಲು ಮುಂದೆ ಓದಿ...  

ಕಳೆದ ವರ್ಷ, ಆಶಿಶ್ ವಿದ್ಯಾರ್ಥಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿ ಮಾಡಿದ್ದರು. 61ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಮೂಲಕ ಟ್ರೋಲ್‌ ಪೇಜ್‌ಗಳಿಗೆ ಆಹಾರವಾದರು.  

ಮೇ 2023 ರಲ್ಲಿ, ಆಶಿಶ್ ವಿದ್ಯಾರ್ಥಿ ಫ್ಯಾಷನ್ ಬ್ಯಾಕ್‌ಗ್ರೌಂಡ್ನ ಉದ್ಯಮಿ ರೂಪಾಲಿ ಅವರನ್ನು ಎರಡನೇ ಮದುವೆಯಾದರು, ರೂಪಾಲಿ ಬರುವಾ ಆಶಿಶ್ ವಿದ್ಯಾರ್ಥಿಗಿಂತ 7 ವರ್ಷ ಚಿಕ್ಕವರು. ಇವರಿಬ್ಬರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದವು.   

ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ನ್ಯಾಯಾಲಯದ ಮುಂದೆ ವಿವಾಹವಾಗಿದ್ದರು. ನಟ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದು, ತಾನು ಬ್ಲಾಗಿಂಗ್ ಮಾಡುವ ಸಮಯದಲ್ಲಿ ರೂಪಾಲಿ ಅವರನ್ನು ಭೇಟಿಯಾಗಿದ್ದರು. ಇವರಿಬ್ಬರ ಬೇಟಿ ಸ್ನೇಹಕ್ಕೆ ತಿರುಗಿತ್ತು, ನಂತರ ಸ್ನೇಹ ಪ್ರೀತಿಯ ದಾರಿ ಹಿಡಿದಿತ್ತು.   

ಆ ಸಮಯದಲ್ಲಿ ರೂಪಾಲಿ ಬರುವಾ ಕೂಡ ತುಂಬಾ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು ಎಂದು ಆಶಿಶ್ ವಿದ್ಯಾರ್ಥಿ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು. 5 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಆಕೆಗೆ ಸಂಪೂರ್ಣ ಒಂಟಿತನ ಕಾಡಿತ್ತಂತೆ.   

ರೂಪಾಲಿ ಮೊದಲು, ನಟ ಆಶಿಶ್ ವಿದ್ಯಾರ್ಥಿ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗಳು 2001 ರಲ್ಲಿ ವಿವಾಹವಾಗಿದ್ದು ಈ ಜೋಡಿಗೆ ಒಬ್ಬ ಮಗ ಕೂಡ ಇದ್ದಾನೆ.   

21 ವರ್ಷಗಳ ವೈವಾಹಿಕ ಜೀವನದ ನಂತರ, ದಂಪತಿಗಳು 2022 ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ವಿಚ್ಛೇದನದ ಒಂದು ವರ್ಷದ ನಂತರವೇ ನಟ ರೂಪಾಲಿಯನ್ನು ಭೇಟಿಯಾಗಿ 2023ರಲ್ಲಿ ವಿವಾಹವಾದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link