ಸೆಪ್ಟೆಂಬರ್ ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ ಪಕ್ಕಾ !ಖಾತೆ ಸೇರುವುದು ಬಹು ದೊಡ್ಡ ಮೊತ್ತ !
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್. ಬಹಳ ದಿನಗಳಿಂದ ಕಾಯುತ್ತಿದ್ದ ಮಹತ್ವದ ಸುದ್ದಿ ಇದೀಗ ಬಂದೊದಗಿದೆ.ಇನ್ನೇನು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಹೊರಬೀಳಲಿದೆ.
ಸೆಪ್ಟೆಂಬರ್ 2024ರಲ್ಲಿ,ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರದ ಮುಂದಿನ ಹೆಚ್ಚಳವನ್ನು ಘೋಷಿಸಲಿದೆ. ಇದು ಜುಲೈ 2024 ರಿಂದ ಜಾರಿಗೆ ಬರಲಿದೆ.
ವರದಿಗಳ ಪ್ರಕಾರ,ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು 3% ದಷ್ಟು ಹೆಚ್ಚಿಸಬಹುದು.ಪ್ರಸ್ತುತ,ತುಟ್ಟಿಭತ್ಯೆ 50% ಆಗಿದೆ.ಇದೀಗ ತುಟ್ಟಿಭತ್ಯೆ 3% ಹೆಚ್ಚಳವಾಗಲಿದೆ. ಹೀಗಾದಾಗ ತುಟ್ಟಿಭತ್ಯೆ 53%ಕ್ಕೆ ಏರಿಕೆಯಾಗಲಿದೆ.ಅಂದರೆ ಮೂಲ ವೇತನದಲ್ಲಿ ದೊಡ್ಡ ಮಟ್ಟದ ಜಂಪ್ ಸಿಗಲಿದೆ.
7ನೇ ವೇತನ ಆಯೋಗದ ಅಡಿಯಲ್ಲಿ, ಕಾರ್ಮಿಕ ಸಚಿವಾಲಯವು ಪ್ರಕಟಿಸಿದ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಭತ್ಯೆಯನ್ನು ನಿರ್ಧರಿಸಲಾಗುತ್ತದೆ.ಪ್ರತಿ ವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.
ಜೂನ್ 2024 ರ AICPI ಸೂಚ್ಯಂಕ ಸಂಖ್ಯೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದರ ಆಧಾರದಲ್ಲಿ ಡಿಎ ಹೆಚ್ಚಳದ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.ಡಿಸೆಂಬರ್ 2023 ರಿಂದ ಜೂನ್ 2024 ರವರೆಗೆ, CPI-IW 2.6 ಅಂಕಗಳಿಂದ ಏರಿದ್ದು, ಈ ಮೂಲಕ 138.8 ರಿಂದ 141.4 ಕ್ಕೆ ಏರಿಕೆ ಕಂಡಿದೆ. ಅಂದರೆ ಈ ಬಾರಿ ತುಟ್ಟಿಭತ್ಯೆ ಹೆಚ್ಚಳ 50.28% ರಿಂದ 53.36% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಜುಲೈ 2024ರಲ್ಲಿ ತುಟ್ಟಿಭತ್ಯೆ ದರವನ್ನು 3% ಹೆಚ್ಚಿಸಿದರೆ ಎಲ್ಲಾ ಉದ್ಯೋಗಿಗಳು ಭಾರೀ ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು.ಈ ಡಿಎ ಹೆಚ್ಚಳದ ನಂತರ,7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸಂಬಳ ಪಡೆಯುತ್ತಿರುವ ಸಾವಿರಾರು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯುತ್ತಾರೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ರಿಯಾಯಿತಿ ದರದಲ್ಲಿ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.