SuryaKumar Yadav Love Story: ಕ್ರಿಕೆಟ್ ಕ್ಷೇತ್ರದಿಂದ ಲವ್ ಪಿಚ್ ನವರೆಗೆ ಟೀಂ ಇಂಡಿಯಾದ ‘Mister 360’ಯ ಸಕ್ಸಸ್ ಫುಲ್ ಜೀವನ
ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಭಾರತಕ್ಕೆ ಸೇರಿದ ದೇವಿಶಾ ಶೆಟ್ಟಿ ಅವರನ್ನು 2016 ರಲ್ಲಿ ವಿವಾಹವಾದರು. ದೇವಿಶಾ ಶೆಟ್ಟಿ 1993 ರಲ್ಲಿ ಮುಂಬೈನಲ್ಲಿ ಜನಿಸಿದರು.
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಅವರ ಮೊದಲ ಭೇಟಿಯು ಮುಂಬೈನ ಪೊದ್ದಾರ್ ಕಾಲೇಜ್ ಆಫ್ ಆರ್ಟ್ಸ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಅವರ ನೃತ್ಯ ಕಂಡು ಸೂರ್ಯಕುಮಾರ್ ಮನಸೋತಿದ್ದರು.
ದೇವಿಶಾ ಶೆಟ್ಟಿ ಕಾಲೇಜು ಜೀವನದಿಂದಲೂ ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದರು. ಡ್ಯಾನ್ಸ್ ಕಾರ್ಯಕ್ರಮದಿಂದಲೇ ಇಬ್ಬರ ಪ್ರೇಮಕಥೆ ಶುರುವಾಗಿದೆ. ಮದುವೆಗೂ ಮುನ್ನ ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿದ್ದರು. ದೇವಿಶಾ 2013 ರಿಂದ 2015 ರವರೆಗೆ 'ದಿ ಲೈಟ್‌ಹೌಸ್ ಪ್ರಾಜೆಕ್ಟ್' ಎಂಬ ಎನ್‌ಜಿಒಗೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ. ಈಗಲೂ ಸಮಾಜಸೇವೆಯಲ್ಲೂ ಸಕ್ರಿಯವಾಗಿದ್ದಾರೆ.
ದೇವಿಶಾ ಶೆಟ್ಟಿ ಹಲವು ಬಾರಿ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಇಬ್ಬರೂ Instagram ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರು ಹಂಚಿಕೊಂಡ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್. ಅವರು ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಎರಡನೇ ಶತಕವನ್ನು ಗಳಿಸಿದರು. ಈ ಪಂದ್ಯದಲ್ಲಿ ಅವರು 51 ಎಸೆತಗಳಲ್ಲಿ 111 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.