ನಾಳೆಯಿಂದ ಈ ರಾಶಿಯವರು ಯಾವ ಕೆಲಸ ಮಾಡಿದರೂ ಗೆಲುವು ಖಚಿತ !

Mon, 16 Jan 2023-9:07 am,

ವೃಷಭ ರಾಶಿ : ವೃಷಭ ರಾಶಿಯವರಿಗೆ ಶನಿ ಸಂಕ್ರಮಣವು ಶುಭಕರವಾಗಿರುತ್ತದೆ. ಇಲ್ಲಿಯವರೆಗೆ ಕೆಲಸಗಳಲ್ಲಿ ಕೈ ಕೊಡುತ್ತಿದ್ದ ಅದೃಷ್ಟ ಇನ್ನು ಮುಂದೆ ಕೈ ಹಿಡಿಯಲಿದೆ. ಕೆಲಸ ಕಾರ್ಯಗಳಿಗೆ ಎದುರಾಗುತ್ತಿದ್ದ ಅಡೆತಡೆ ನಿವಾರಣೆಯಾಗುತ್ತದೆ. ದೊಡ್ಡ ಹುದ್ದೆ, ಕೈ ತುಂಬಾ ಹಣ ಸಿಗಲಿದೆ. ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ವೃತ್ತಿ ಮತ್ತು ವೈಯಕ್ತಿಕ ಎರಡೂ ಜೀವನದಲ್ಲಿ ಯಶಸ್ಸು ಸಿಗುವುದು. 

ಮಿಥುನ ರಾಶಿ : ಶನಿಯ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ದೊಡ್ಡ ಮಟ್ಟದ ಪರಿಹಾರ ನೀಡಲಿದೆ. ಮಿಥುನ ರಾಶಿಯವರ ಜಾತಕದಲ್ಲಿನ ಎರಡೂವರೆ ವರ್ಷದ ಶನಿ ದೆಸೆ ಕೊನೆಯಾಗಲಿದೆ. ಹೀಗಾಗಿ ಇಲ್ಲಿವರೆಗೆ ಅನುಭವಿಸುತ್ತಿದ್ದ ಎಲ್ಲಾ ಕಷ್ಟಗಳು ಕೊನೆಯಾಗಲಿವೆ. ಮಾನಸಿಕ ಒತ್ತಡದಿಂದ ಮುಕ್ತ ಸಿಗಲಿದೆ. ವೃತ್ತಿ ಜೀವನದಲ್ಲಿ ಶುಭ ಸಮಯ ಆರಂಭವಾಗಲಿದೆ. 

ತುಲಾ ರಾಶಿ: ಶನಿ ಸಂಕ್ರಮಿಸಿದ ತಕ್ಷಣ, ತುಲಾ ರಾಶಿಯವರ ಜಾತಕದಲ್ಲಿನ ಶನಿ ಧೈಯಾ ಕೊನೆಯಾಗಲಿದೆ. ಈ ಮೂಲಕ ಜೀವನದ ಬಹುತೇಕ ಸಮಸ್ಯೆಗಳು ಅಂತ್ಯವಾಗಲಿದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. ಹಣದ ಸಮಸ್ಯೆಗಳು ಕೊನೆಯಾಗಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ.  

ಧನು ರಾಶಿ : ಏಳೂವರೆ ವರ್ಷದಿಂದ ಅನುಭವಿಸುತ್ತಿದ್ದ ಎಲ್ಲಾ ಕಷ್ಟ ನಷ್ಟಗಳಿಗೆ ಕೊನೆ ಬೀಳಲಿದೆ. ಜೀವನದಲ್ಲಿನ ಸಂಕಟಗಳು ಕೊನೆಯಾಗಲಿದೆ. ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲಿದೆ. ರೋಗಗಳಿಂದ ಮುಕ್ತಿ ದೊರೆಯಲಿದೆ. ಒತ್ತಡ ದೂರವಾಗುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಮಾಡುವ ಕೆಲಸಗಳಲ್ಲಿ ಅದೃಷ್ಟ ಜೊತೆಯಾಗುವುದು. 

(ಸೂಚನೆ: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link