ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!
ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಹೌದು ನಮ್ಮ ಕಣ್ಣ ಮುಂದೆಯೇ ಸಂಜೀವಿನಿ ಇದ್ದರೂ ನಮಗೆ ಅದರ ಮಹತ್ವ ಗೊತ್ತಿರುವುದಿಲ್ಲ. ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
ಈ ಗಿಡದ ಹೂವು ಮತ್ತು ಹಣ್ಣನ್ನು ಸೇವಿಸಿದರೆ ಬ್ಲಡ್ ಶುಗರ್ ಶಾಶ್ವತವಾಗಿ ನಿಯಂತ್ರಣಕ್ಕೆ ಬರುತ್ತದೆ.
ಈ ಹೂವನ್ನು ಕೇಪುಳ,ಕುಂತಲ, ನೇರಳ, ಕಿಸ್ಕಾರ, ಪಾರಂತಿ, ಬಿಂದುಕ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಇದು ಹಳದಿ, ಗುಲಾಬಿ, ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಕೇಪುಳದ ಹೂವು ಮತ್ತು ಹಣ್ಣನ್ನು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಮನ್ನಣೆ ಇದೆ. ಮಧುಮೇಹಿಗಳಿಗೂ ಇದು ಅಮೃತವಿದ್ದ ಹಾಗೆ.
ಈ ಗಿಡದ ಹೂವು, ಎಲೆಗಳು ಮತ್ತು ಬೇರು ಸೇರಿದಂತೆ ಎಲ್ಲಾ ಭಾಗಗಳನ್ನು ಮಧುಮೇಹಕ್ಕೆ ಸಂಜೀವಿನಿ ಎಂದೇ ಪರಿಗಣಿಸಲಾಗುತ್ತದೆ.ಈ ಹೂವು ಮತ್ತು ಹಣ್ಣು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿಯೇ ಇದನ್ನು ಸೇವಿಸಿದ ತಕ್ಷಣ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.
ತಿನ್ನಲು ಬಹಳ ರುಚಿಯಾಗಿರುವ ಕೇಪುಳ ಹಣ್ಣನ್ನು ಹಾಗೆಯೇ ನೇರವಾಗಿ ಸೇವಿಸಬಹುದು. ಈ ಗಿಡದ ಚಿಗುರು ಎಲೆಗಳನ್ನು ತೆಗೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸೇವಿಸಿದರೆ ಇದು ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.