Fruits astrology: ನಿಮ್ಮ ನೆಚ್ಚಿನ ಹಣ್ಣಿನಿಂದ ನಿಮ್ಮ ಸ್ವಭಾವವನ್ನು ತಿಳಿಯಬಹುದು

Mon, 19 Jul 2021-11:11 am,

ಬಹುತೇಕ ಜನರಿಗೆ ಮಾವಿನ ಹಣ್ಣೆಂದರೆ ಬಲು ಪ್ರಿಯ. ಹಣ್ಣುಗಳ ರಾಜನಾದ ಮಾವನ್ನು (Mango) ಇಷ್ಟಪಡುವ ಜನರು ತಮ್ಮ ಆಯ್ಕೆಯ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅಂತಹ ಜನರು ತಾವು ಪ್ರೀತಿಸುವ ವ್ಯಕ್ತಿ ಅಥವಾ ವಸ್ತುವನ್ನು ಪಡೆಯಲು ಯಾವುದೇ ಮಟ್ಟಿಕ್ಕೆ ಬೇಕಾದರೂ ಹೋಗುತ್ತಾರೆ. ಈ ಜನರು ಉತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ.

ಬಾಳೆಹಣ್ಣುಗಳು ಸಾಮಾನ್ಯವಾಗಿ ಅಗ್ಗವಾಗಿದ್ದು ಪೌಷ್ಠಿಕಾಂಶದಿಂದ ಕೂಡಿದೆ. ಬಾಳೆಹಣ್ಣನ್ನು (Banana) ಇಷ್ಟಪಡುವ ಜನರು ತುಂಬಾ ಭಾವುಕರಾಗಿರುತ್ತಾರೆ. ಬಹುತೇಕ ವಿಷಯಗಳಲ್ಲಿ ಇವರು ಮೆದುಳಿಗೆ ಬದಲಿಗೆ ಹೃದಯವನ್ನು ಬಳಸುವುದರಿಂದ ಕೆಲವೊಮ್ಮೆ ತೊಂದರೆಗೂ ಸಿಲುಕುವುದುಂಟು. ಆದರೆ ಇವರು ಉತ್ತಮ ಕುಟುಂಬ ಜೀವನವನ್ನು ಹೊಂದಿದ್ದಾರೆ.

ಸೇಬನ್ನು (Apple) ಹೆಚ್ಚು ಪ್ರೀತಿಸುವ ಜನರಿಗೆ ಮೂಗಿನ ತುದಿಯಲ್ಲಿಯೇ ಕೋಪ ಇರುತ್ತದೆ. ಆದರೆ ಇವರು ಉತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ಜನರು ಹಠಮಾರಿ ಗುಣವನ್ನು ಹೊಂದಿರುತ್ತಾರೆ. ಹಿಡಿದ ಕೆಲಸವನ್ನು ಮಾಡಿಯೇ ತೀರಿಸುವ ಸ್ವಭಾವ ಇವರದ್ದಾಗಿರುತ್ತದೆ.  ಅಂತಹ ಜನರು ನೇರ ಮತ್ತು ವಿಶ್ವಾಸಾರ್ಹರು.

ಇದನ್ನೂ ಓದಿ- ಈ ಹಣ್ಣು, ತರಕಾರಿಗಳ ಸಿಪ್ಪೆಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ

ಕಿತ್ತಳೆ ಹಣ್ಣನ್ನು (Orange) ಹೆಚ್ಚು ಇಷ್ಟಪಡುವ ಜನರು ನಾಚಿಕೆ ಮತ್ತು ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತಾರೆ. ಅಂತಹ ಜನರು ತಮ್ಮ ಹೃದಯದಿಂದ ಎಲ್ಲವನ್ನೂ ಮಾಡುತ್ತಾರೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಚೆರ್ರಿ (Cherry) ಹಣ್ಣುಗಳನ್ನು ಇಷ್ಟಪಡುವ ಜನರ ವೃತ್ತಿಜೀವನವು ಏರಿಳಿತವಾಗಿದ್ದರೂ ಅವರಿಗೆ ಗೌರವ ಸಿಗುತ್ತದೆ. ಈ ಜನರು ಸರಳ ಜೀವನವನ್ನು ನಡೆಸಲು ಮತ್ತು ಇತರರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ. ಅಂತಹ ಜನರು ಕೆಲವು ದೊಡ್ಡ ಗುರಿಯನ್ನು ಬೆನ್ನಟ್ಟುತ್ತಾರೆ.

ಇದನ್ನೂ ಓದಿ- ಸ್ಟ್ರೆಸ್ ಕಡಿಮೆಯಾಬೇಕಾ..? ಚೆನ್ನಾಗಿ ಹಣ್ಣು, ತರಕಾರಿ ತಿನ್ನಿ

ಅನಾನಸ್ (Pineapple) ಇಷ್ಟಪಡುವ ಜನರು ಅದ್ಭುತ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮತ್ತು ತ್ವರಿತವಾಗಿ ಮಾಡುತ್ತಾರೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link