ಈ ಕಾಳನ್ನು ನೀರಲ್ಲಿ ಹಾಕಿ ಊಟದ ನಂತರ ಕುಡಿಯಿರಿ.. 1 ವಾರದವರೆಗೆ ಬ್ಲಡ್ ಶುಗರ್ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ !
ಮಧುಮೇಹ ಅಪಾಯಾರಿ ಕಾಯಿಲೆಯಾಗಿದೆ. ಶುಗರ್ ಹೆಚ್ಚಾಗುವುದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ.
ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳಿಗೆ ಸೋಂಪು ಕಾಳು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಸೋಂಪು ಕಾಳು ಫೈಬರ್, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣದಂತಹ ಅಂಶಗಳನ್ನು ಒಳಗೊಂಡಿದೆ. ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತವೆ.
ಸೋಂಪು ಕಾಳಿನಲ್ಲಿ ಫೈಟೊಕೆಮಿಕಲ್‌ಗಳು ಅಧಿಕವಾಗಿವೆ. ಇವು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ.
ಸೋಂಪು ಕಾಳನ್ನು ಹಾಗೆಯೇ ತಿನ್ನಬಹುದು. ಇಲ್ಲವೇ ಸೋಂಪು ಕಾಳಿನ ನೀರನ್ನು ಕುಡಿಯಬಹುದು. ಮಧುಮೇಹ ರೋಗಿಗಳು ಸೋಂಪು ಟೀ ತಯಾರಿಸಿ ಕುಡಿಯಬಹುದು.
ಶುಗರ್ ನಿಯಂತ್ರಿಸಲು ಪ್ರತಿದಿನ ಊಟದ ನಂತರ ಸೋಂಪು ಕಾಳನ್ನು ನೆನೆಸಿದ ನೀರು ಕುಡಿಯುವುದು ಸಹಾಯಕವಾಗಿದೆ. ಇದು ತೂಕ ಇಳಿಕೆಗೆ ಸಹ ಉಪಯುಕ್ತವಾಗಿದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.