Gail Omvedt: ಭಾರತೀಯ ಬಹುಜನ ಚಳುವಳಿಯ ಗಟ್ಟಿ ಧ್ವನಿ ಗೇಲ್ ಓಮ್ವೇಡ್
ಮಹಾತ್ಮ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ ಭೀಮರಾವ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಜಗತ್ತಿಗೆ ಸಾರುವಲ್ಲಿ ಓಮ್‌ವೆಡ್ ಅವರ ಕೊಡುಗೆ ಪ್ರಮುಖವಾದದ್ದು.
ಓಮ್‌ವೆಡ್ ಅವರ ವಿದ್ವತ್ಪೂರ್ಣ ಬರಹಗಳು ಈ ದೇಶದ ತಳಮಟ್ಟದ ಕ್ರಿಯಾಶೀಲತೆಯೊಂದಿಗೆ ಆಳವಾಗಿ ಸಂಪರ್ಕವನ್ನು ಹೊಂದಿದ್ದವು, ಮತ್ತು ಆ ಮೂಲಕ ಅವರು ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಪ್ರಭಾವ ಬೀರಿದ್ದರು.
ನಟ ಅಮೀರ್ ಖಾನ್ ಅವರೊಂದಿಗೆ ಗೇಲ್ ಓಮ್ವೇಡ್
ಖ್ಯಾತ ಎಡಪಂಥೀಯ ಚಿಂತಕರಾದ ಭರತ್ ಪಾತಂಕರ್ ಮತ್ತು ಓಮ್‌ವೆಡ್ 1980 ರಲ್ಲಿ ಮಹಾರಾಷ್ಟ್ರದಲ್ಲಿ ರೈತರು ಮತ್ತು ಇತರರ ಸಮಸ್ಯೆಗಳನ್ನು ಪರಿಹರಿಸಲು ಸಾಮಾಜಿಕ ರಾಜಕೀಯ ಸಂಘಟನೆಯಾದ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು.
ಕಾನ್ಶಿರಾಂ ಅವರೊಂದಿಗೆ ವೇದಿಕೆಯಲ್ಲಿ ಡಾ.ಗೇಲ್
ಪತಿ ಭರತ್ ಪಾತಂಕರ್ ಅವರೊಂದಿಗೆ ಹರೆಯದ ದಿನಗಳಲ್ಲಿ ಗೇಲ್ ಓಮ್ವೇಡ್
ಮಹಿಳಾ ಚಳುವಳಿ ಮತ್ತು ಆದಿವಾಸಿ, ಬಹುಜನ ಮತ್ತು ಭೂಹೀನ ಜನರ ಚಳುವಳಿಗಳಲ್ಲಿ ಅವರ ಭಾಗವಹಿಸುವಿಕೆಯು ಅವರ ವಿದ್ವತ್ ನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನಬಹುದು