ಜಾತಕದಲ್ಲಿ ಗಜಕೇಸರಿ ಯೋಗ: ಈ ಜನರಿಗೆ ಐಷಾರಾಮಿ ಬದುಕು ಪ್ರಾಪ್ತಿ-ರಾಜರಂತೆ ಜೀವನ ನಡೆಸುವರು..!
ಜಾತಕದಲ್ಲಿ ಯೋಗವೊಂದಿದ್ದರೆ ಆತನ ಬದುಕು ಕ್ಷಣದಲ್ಲಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಸರ್ವ ಯೋಗಗಳು ಆತಮ ಬಳಿ ಬರುತ್ತದೆ ಎಂಬುದು ನಂಬಿಕೆ. ಹಿಂದೂ ಧರ್ಮದಲ್ಲಿ ಅನೇಕ ರಾಜಯೋಗಗಳನ್ನು ಹೆಸರಿಸಲಾಗಿದೆ. ಅದರಲ್ಲಿ ಒಂದು ಗಜಕೇಸರಿ ಯೋಗ.
ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಜಾತಕದಲ್ಲಿ ಚಂದ್ರ ಮತ್ತು ಗುರುಗಳ ಸಂಯೋಗದಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಅಥವಾ ಚಂದ್ರ ಮತ್ತು ಗುರು ಕೂಡಿದರೆ ಗಜಕೇಸರಿ ಯೋಗವು ಸೃಷ್ಟಿಯಾಗುತ್ತದೆ.
ಯಾರ ಜನ್ಮ ಕುಂಡಲಿಯಲ್ಲಿ ಈ ಗಜಕೇಸರಿ ಯೋಗವಿರುತ್ತದೆಯೋ ಅವರು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಾರೆ. ಕೈಗೊಂಡ ಪ್ರತೀ ಕಾರ್ಯದಲ್ಲಿ ಸಿದ್ಧಿ ಪ್ರಾಪ್ತವಾಗುತ್ತದೆ.
ಗುರುವು ಚಂದ್ರನು ಕುಳಿತಿರುವ ಸ್ಥಳದಿಂದ ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಇಲ್ಲವೇ ಚಂದ್ರ ಮತ್ತು ಗುರುಗಳ ಸಂಯೋಗದಿಂದ ಸೃಷ್ಟಿಯಾಗುತ್ತದೆ. ಗಜಕೇಸರಿ ಎಂದರೆ ರಾಜನಂತೆ ಆನೆಯ ಮೇಲೆ ಸವಾರಿ ಮಾಡುವವನು ಎಂದರ್ಥ. ಇಂದ್ರನ ವಾಹನ ಆನೆ. ಗುರು ಧರ್ಮ ಮತ್ತು ಮೋಕ್ಷದ ಅಧಿಪತಿ.
ಗಜಕೇಸರಿ ಯೋಗವು ಜಾತಕದಲ್ಲಿದ್ದರೆ, ಸಂತೋಷ ಮತ್ತು ಧರ್ಮ ಒಟ್ಟಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಗಜಕೇಸರಿ ಯೋಗವು ವ್ಯಕ್ತಿಯ ಜಾತಕದಲ್ಲಿದ್ದರೆ, ಸಮಾಜದಲ್ಲಿ ವ್ಯಕ್ತಿಯ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಳವಾಗುತ್ತದೆ. ಅಷ್ಟೇ ಅಲ್ಲದೆ, ರಾಜರಂತೆ ಬದುಕು ಸಾಗಿಸುತ್ತಾರೆ.