2025ರಲ್ಲಿ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಬೆಳಗಲಿದೆ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಂಪತ್ತು ವೃದ್ಧಿ.. ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!
ಗುರು ಗ್ರಹವು 2025 ರಲ್ಲಿ ಮೇ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇ 28 ರಂದು ಚಂದ್ರನೊಂದಿಗೆ ಗುರುವಿನ ಸಂಯೋಗವು ಗಜಕೇಸರಿ ಯೋಗವನ್ನು ಉಂಟುಮಾಡುತ್ತದೆ. ಇದನ್ನು ಅತ್ಯಂತ ಮಂಗಳಕರವಾದ ಯೋಗವೆಂದು ಪರಿಗಣಿಸಲಾಗಿದೆ.
ಈ ಯೋಗದ ರಚನೆಯು ಜೀವನದಲ್ಲಿ ಅನೇಕ ರೀತಿಯ ಸಂತೋಷವನ್ನು ತರುತ್ತದೆ. ಮಿಥುನ ರಾಶಿಯಲ್ಲಿ ಗಜಕೇಸರಿ ಯೋಗದ ರಚನೆಯಿಂದ ಯಾವ ರಾಶಿಗಳು ಲಾಭವನ್ನು ಪಡೆಯಬಹುದು ಎಂಬುದನ್ನು ನಾವು ತಿಳಿಯೋಣ…
ತುಲಾ ರಾಶಿ : ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ತೋರಬಹುದು. ವೃತ್ತಿಜೀವನದಲ್ಲಿ ಉನ್ನತಿ ಜೊತೆಗೆ ಯಶಸ್ಸನ್ನು ಸಾಧಿಸಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು.
ಸಿಂಹ ರಾಶಿ : ಆರ್ಥಿಕ ಲಾಭದ ಅನೇಕ ಮಾರ್ಗಗಳು ತೆರೆಯಬಹುದು. ಪೂರ್ವಿಕರ ಆಸ್ತಿ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳು ಕೊನೆಗೊಳ್ಳಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವಿರಿ.
ಕುಂಭ ರಾಶಿ : ಆರ್ಥಿಕ ಲಾಭವಾಗಲಿದೆ. ಬಹುಕಾಲದ ಸಮಸ್ಯೆಗಳಿಗೆ ಅಂತ್ಯ ಸಿಗಲಿದೆ. ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯುವಿರಿ. ವಾಹನ ಸುಖದ ಅವಕಾಶವೂ ದೊರೆಯಲಿದೆ. ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು.
ಕನ್ಯಾ ರಾಶಿ : ಮಗುವನ್ನು ಹೊಂದುವ ಬಯಕೆ ಈಡೇರಹುದು. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವನ್ನು ಪಡೆಯುವಿರಿ. ಅವಿವಾಹಿತರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ಮಿಥುನ ರಾಶಿ : ಶಿಕ್ಷಣ ಕ್ಷೇತ್ರದಲ್ಲೂ ಲಾಭ ಪಡೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಬಹುದು. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಆರೋಗ್ಯ ಉತ್ತಮವಾಗಿರಲಿದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.