PUBG Ban ಆದರೇನಂತೆ ಬಂದಿದೆ Game Valheim
PUBG ಮೊಬೈಲ್ ನಿಷೇಧದ ನಂತರ ಗೇಮ್ ಪ್ರಿಯರು ಯಾವುದೇ ಬದಲಿಯನ್ನು ನೋಡಲಿಲ್ಲ. ಆದರೆ ವಾಲ್ಹೈಮ್ ಈ ತಿಂಗಳ ಫೆಬ್ರವರಿ 2 ರಂದು ಬಿಡುಗಡೆಯಾಗಿದೆ. ಈ ಆಟವು ಕೆಲವೇ ದಿನಗಳಲ್ಲಿ ಗೇಮ್ ಸ್ಟೀಮ್‌ನಲ್ಲಿ 3.6 ಲಕ್ಷಕ್ಕೂ ಹೆಚ್ಚು ಏಕಕಾಲೀನ ಆಟಗಾರರನ್ನು ಗಳಿಸಿದೆ. 3.6 ಲಕ್ಷ ಆಟಗಾರರನ್ನು ಪಡೆಯಲು ಪಬ್‌ಜಿ (PUBG) ಮೊಬೈಲ್‌ಗೆ ಮೂರು ತಿಂಗಳಿಗಿಂತ ಹೆಚ್ಚು ಸಮಯ ಹಿಡಿಯಿತು.
ವಾಲ್ಹೈಮ್ (Valheim) ಬದುಕುಳಿಯುವ ಆಟವಾಗಿದೆ. ನಿಮ್ಮ ಸ್ನೇಹಿತರೊಂದಿಗೆ ನೀವು ವೈಕಿಂಗ್-ಥೀಮ್ ಆಟಗಳನ್ನು ಆಡಬಹುದು. ಸಿಂಗಲ್ ಪ್ಲೇಯರ್ ಮತ್ತು ಕೋ-ಆಪ್ ಪಿವಿಇ (PvE) ಮೆಕ್ಯಾನಿಕ್ಸ್‌ನಲ್ಲಿ ಆಟವನ್ನು ಆಡಬಹುದು. ಪಿವಿಇಯಲ್ಲಿ ವಾಲ್ಹೈಮ್ ಅನ್ನು ಗರಿಷ್ಠ 10 ಆಟಗಾರರೊಂದಿಗೆ ಆಡಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ - FAU-G Launch: ಬಿಡುಗಡೆಯಾಯ್ತು ಫೌ-ಜಿ Mobile Game, ಇಲ್ಲಿದೆ Download Link
ವಾಸ್ತವವಾಗಿ ವಾಲ್ಹೈಮ್ ಉತ್ತಮ ಗ್ರಾಫಿಕ್ಸ್ ಮತ್ತು ಧ್ವನಿಯನ್ನು ಬಳಸಿದ್ದಾರೆ. ಇದಲ್ಲದೆ, ಸುಲಭವಾದ ಆಟದ ಕಾರ್ಯವಿಧಾನವು ಇತರ ಆಟಗಳಿಗಿಂತ ಉತ್ತಮವಾಗಿಸುತ್ತದೆ ಎಂದು ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ - ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದರೂ TikTok ನಂಬರ್ ಒನ್ ಅಪ್ಲಿಕೇಶನ್
ನೀವು ಆನ್‌ಲೈನ್ ಪಿಸಿ ಗೇಮ್ ಸ್ಟೀಮ್‌ನಿಂದ (Online PC Game Steam) ನೇರವಾಗಿ ವಾಲ್ಹೈಮ್ ಆಟಗಳನ್ನು ಖರೀದಿಸಬಹುದು. ಇದರ ಬೆಲೆ 529 ರೂಪಾಯಿ. ಇದು ಡೆಸ್ಕ್‌ಟಾಪ್ ಫಾರ್ಮ್ಯಾಟ್ ಆಟ. ಅಂದರೆ, ನೀವು ಅದನ್ನು ಪಿಸಿಯಲ್ಲಿ ಮಾತ್ರ ಖರೀದಿಸಬಹುದು ಮತ್ತು ಪ್ಲೇ ಮಾಡಬಹುದು. ಮೊಬೈಲ್ ಆವೃತ್ತಿಯನ್ನು ಸದ್ಯ ಇನ್ನೂ ಪ್ರಾರಂಭಿಸಲಾಗಿಲ್ಲ.
ನೀವು ಇನ್ನೂ PUBG ಮೊಬೈಲ್ ಭಾರತಕ್ಕೆ ಮರಳಬೇಕೆಂದು ಆಶಿಸುತ್ತಿದ್ದರೆ, ನೀವು ನಿರಾಶೆಗೊಳ್ಳಬೇಕಾಗುತ್ತದೆ. ನಿಷೇಧಿತ ಚೀನಾದ ಆ್ಯಪ್ (Chinese App)ಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.