Ganesh Chaturthi 2022: ಸ್ವಾತಂತ್ರ ಚಳುವಳಿಯಲ್ಲಿ ಗಣೇಶ್ ಚತುರ್ಥಿ ಪಾತ್ರದ ಬಗ್ಗೆ ನಿಮಗೆಷ್ಟು ಗೊತ್ತು?
ಜನರು ಮೋದಕವನ್ನು ಗಣೇಶನ ನೆಚ್ಚಿನ ತಿಂಡಿ ಎಂದು ನಂಬಿರುವುದರಿಂದ ಗಣೇಶೋತ್ಸವದ ಸಂದರ್ಭದಲ್ಲಿ ಇಪ್ಪತ್ತೊಂದು ಮೋದಕಗಳನ್ನು ದೇವರಿಗೆ ಮತ್ತು ಪ್ರಸಾದವಾಗಿ ಅರ್ಪಿಸುವುದರೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ
ಇನ್ನೂ ಗೋವಾದಲ್ಲಿ ಗಣೇಶ ಚತುರ್ಥಿಯು ಸಾರ್ವಜನಿಕ ಹಬ್ಬಕ್ಕಿಂತ ಹೆಚ್ಚಾಗಿ ಕುಟುಂಬದ ಹಬ್ಬವಾಗಿದೆ.
ಲೋಕಮಾನ್ಯ ತಿಲಕರು 1893 ರಲ್ಲಿ ತಮ್ಮ ಪತ್ರಿಕೆ ಕೇಸರಿಯಲ್ಲಿ ಬರೆದ ಲೇಖನದಲ್ಲಿ ಜಾವಲೆಯವರ ಪ್ರಯತ್ನಗಳನ್ನು ಶ್ಲಾಘಿಸಿದರು.ತದನಂತರ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಬೃಹತ್ ಪ್ರಮಾಣದಲ್ಲಿ ಆಚರಿಸಲು ಅವರು ಕರೆ ನೀಡಿದರು.
ಈ ಹಬ್ಬವು ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಖಾಸಗಿ ಕುಟುಂಬದ ಆಚರಣೆಯಾಗಿ ಚಾಲ್ತಿಯಲ್ಲಿತ್ತು, ಆದರೆ ಇದನ್ನು ಜನರ ಹಬ್ಬವಾಗಿ ಪರಿವರ್ತಿಸಿದ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ.ಅದರಲ್ಲೂ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸುವ ನಿಟ್ಟಿನಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು.
ಗಣೇಶ ಚತುರ್ಥಿಯನ್ನು ಪುಣೆಯಲ್ಲಿ ಸಾಂಪ್ರದಾಯಿಕವಾಗಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕಾಲದಿಂದಲೂ ಆಚರಿಸಲಾಗುತ್ತದೆ, ಗಣೇಶನು ಪೇಶ್ವೆಗಳ ಕುಲದೇವರಾಗಿದ್ದರಿಂದಾಗಿ ಆಗ ವೈಭವದಿಂದ ಆಚರಿಸಲಾಗುತ್ತಿತ್ತು. ಆದರೆ ಕಾಲಾಂತರದಲ್ಲಿ 1818 ರಲ್ಲಿ ಪೇಶ್ವೆಗಳ ಪತನದೊಂದಿಗೆ ಗಣೇಶೋತ್ಸವದ ಆಚರಣೆ ಮಹಾರಾಷ್ಟ್ರದಲ್ಲಿ ಕಳೆಗುಂದುತ್ತಾ ಬಂದಿತು.