ವೇಸ್ಟ್ ಎಂದು ಬೆಳ್ಳುಳ್ಳಿ ಸಿಪ್ಪೆ ಬಿಸಾಡುತ್ತಿದ್ದೀರಾ? ಬಿಳಿಕೂದಲನ್ನು ಬುಡದಿಂದಲೇ ಪರ್ಮನೆಂಟ್ ಆಗಿ ಕಪ್ಪಾಗಿಸಲು ಇದು ಸಾಕು!

Mon, 13 May 2024-4:56 pm,

ಬೆಳ್ಳುಳ್ಳಿಯ ಸಿಪ್ಪೆಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ, ಬೆಳ್ಳುಳ್ಳಿಯನ್ನು ಶತಮಾನಗಳಿಂದ ಔಷಧೀಯವಾಗಿ ಬಳಸಲಾಗುತ್ತದೆ.

ಇನ್ನು ಬೆಳ್ಳುಳ್ಳಿ ಸಿಪ್ಪೆಯ ಪುಡಿಯನ್ನು ತಯಾರಿಸಿಕೊಂಡು ಅನೇಕ ವಿಧಗಳಲ್ಲಿ ಬಳಕೆ ಮಾಡಬಹುದು. ಇದು ಆರೋಗ್ಯಕ್ಕೆ ಬಹಳಷ್ಟು ಮುಖ್ಯವಾಗಿವೆ.

ಬೆಳ್ಳುಳ್ಳಿ ಸಿಪ್ಪೆಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಜನರಿಗೆ ಪ್ರಯೋಜನಕಾರಿ. ಇದಕ್ಕಾಗಿ ಬೆಳ್ಳುಳ್ಳಿಯ ಸಿಪ್ಪೆಯನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿಡಿ. ನಂತರ ಈ ನೀರನ್ನು ಅಲರ್ಜಿ ಇರುವ ಕಡೆ ಹಚ್ಚಿ. ಪ್ರತಿದಿನ ಈ ಪರಿಹಾರವನ್ನು ಮಾಡುವುದರಿಂದ ತುರಿಕೆ ಸಮಸ್ಯೆಯಿಂದ ತ್ವರಿತ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ

ಅತಿಯಾದ ಕೂದಲು ಉದುರುವಿಕೆ ಅಥವಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೆಳ್ಳುಳ್ಳಿ ಸಿಪ್ಪೆಯ ನೀರು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಬೆಳ್ಳುಳ್ಳಿಯ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ನಂತರ ಈ ನೀರಿನಿಂದ ಕೂದಲನ್ನು ತೊಳೆಯಿರಿ. ಅಥವಾ ಸ್ಪ್ರೇ ಬಾಟಲಿಯ ಮೂಲಕ ಬಳಸಬಹುದು. ಇದಲ್ಲದೆ ಇನ್ನೊಂದು ವಿಧಾನವಿದೆ. ಬೆಳ್ಳುಳ್ಳಿ ಸಿಪ್ಪೆಯನ್ನು ಹುರಿದು ಪುಡಿ ಮಾಡಿ, ತೆಂಗಿನೆಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದಲೇ ಬಿಳಿಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.

ಪಾದದ ಊತವನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಎಣ್ಣೆಗಳು ಲಭ್ಯವಿದ್ದರೂ, ಬೆಳ್ಳುಳ್ಳಿಯ ಸಿಪ್ಪೆಯನ್ನು ಬಳಸಿಕೊಂಡು ನೀವು ಈ ನೋವನ್ನು ನಿವಾರಿಸಬಹುದು. ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ. ನೀರು ಬೆಚ್ಚಗಿರುವಾಗ ಪಾದಗಳನ್ನು ಅದರೊಳಗೆ ಇಡಿ. ಕ್ರಮೇಣ, ಪಾದಗಳಲ್ಲಿನ ಊತ ಮತ್ತು ನೋವು ನಿವಾರಣೆಯಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link