Garuda Puran: ಈ ಕೆಟ್ಟ ಅಭ್ಯಾಸಗಳನ್ನು ಇಂದೇ ನಿಲ್ಲಿಸಿ, ಇಲ್ಲದಿದ್ರೆ ಹಣಕ್ಕಾಗಿ ಕಷ್ಟಪಡಬೇಕಾಗುತ್ತೆ!
ಗರುಡ ಪುರಾಣದಲ್ಲಿ ಮಾನವನ ಕೆಲವು ಅಭ್ಯಾಸಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಅಭ್ಯಾಸಗಳಿಂದಾಗಿ ಮನುಷ್ಯ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಹಣದ ಕೊರತೆಯಿಂದ ಬಡತನ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸುವುದು ಅವಶ್ಯಕ.
ಯಾವುದೇ ಒಬ್ಬ ವ್ಯಕ್ತಿಗೆ ಹಣ ಬಂದರೆ ಆತ ಎಂದಿಗೂ ಹೆಮ್ಮೆಪಡಬಾರದು. ಗರುಡ ಪುರಾಣದ ಪ್ರಕಾರ, ಹಣದ ಬಗ್ಗೆ ಹೆಮ್ಮೆ ಪಡುವ ಜನರ ಬೌದ್ಧಿಕ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ ಮತ್ತು ಕ್ರಮೇಣ ಬಡತನವು ಹರಡಲು ಪ್ರಾರಂಭಿಸುತ್ತದೆ.
ಯಾರ ಮನೆಯಲ್ಲಿ ಶುಚಿತ್ವವಿರತ್ತದೋ ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳಂತೆ. ಹೀಗಾಗಿ ಮನೆಯಲ್ಲಿ ಯಾವಾಗಲೂ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯ. ಪ್ರತಿದಿನ ಸ್ನಾನದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸುವುದು ಸಹ ಅವಶ್ಯಕ. ತಾಯಿ ಲಕ್ಷ್ಮಿದೇವಿ ಕೊಳಕು ಬಟ್ಟೆ ಧರಿಸಿದ್ದಕ್ಕೆ ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳಂತೆ.
ಬೆಳಗ್ಗೆ ಬೇಗ ಏಳುವುದು ಕೂಡ ಮಂಗಳಕರವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮುಂಜಾನೆ ಬೇಗನೆ ಎದ್ದು ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮಿದೇವಿಯು ಸಂತೋಷವಾಗಿರುತ್ತಾಳೆ. ದೀರ್ಘಕಾಲ ಅಥವಾ ಹೆಚ್ಚುಹೊತ್ತು ಮಲಗುವ ವ್ಯಕ್ತಿಗಳು ಯಾವಾಗಲೂ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಗರುಡ ಪುರಾಣದ ಪ್ರಕಾರ ಯಾವಾಗಲೂ ಇತರರ ನ್ಯೂನತೆಗಳನ್ನು ಕಂಡುಹಿಡಿಯುವವರು ಸಮಸ್ಯೆಗಳು ಎದುರಿಸುತ್ತಾರಂತೆ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಮಾನ ಮಾಡುವ ಜನರ ಬಗ್ಗೆ ಮೇಲೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ಇಂತಹವರ ಮನೆಗೆ ಎಂದಿಗೂ ಲಕ್ಷ್ಮಿದೇವಿ ಪ್ರವೇಶಿಸುವುದಿಲ್ಲವಂತೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)