Garuda Purana: ವ್ಯಕ್ತಿಯ ಈ ಅಭ್ಯಾಸಗಳೇ ಬಡತನಕ್ಕೆ ಮೂಲ ಕಾರಣ

Wed, 24 May 2023-1:09 pm,

ಗರುಡ ಪುರಾಣದ ಪ್ರಕಾರ, ಯಾವುದೇ ವ್ಯಕ್ತಿಯ ಕೆಲವು ಅಭ್ಯಾಸಗಳೇ ಆತನ ಅವನತಿಗೆ ಬಹಳ ಮುಖ್ಯ ಕಾರಣಗಳಾಗಿದ್ದು, ಈ ದುರಭ್ಯಾಸಗಳನ್ನು ಬಿಡದೆ ಇದ್ದರೆ ಅವು ಆತನ ಬಡತನಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಅಂತಹ ಅಭ್ಯಾಸಗಳೆಂದರೆ...

ಯಾವುದೇ ವಿಷಯದಲ್ಲೂ ಕೂಡ ದುರಾಸೆ ಒಳ್ಳೆಯದಲ್ಲ. ಗರುಡ ಪುರಾಣದ ಪ್ರಕಾರ, ದುರಾಸೆಯುಳ್ಳ ವ್ಯಕ್ತಿ, ಹಣ ಗಳಿಕೆಗಾಗಿ ಕೆಟ್ಟ ದಾರಿಯನ್ನು ಹಿಡಿರುವ ವ್ಯಕ್ತಿಯ ಬಳಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸುವುದಿಲ್ಲ. ಅವರ ಕೈಯಲ್ಲಿ ಎಂದಿಗೂ ಹಣ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಜೀವನದಲ್ಲಿ ನಮ್ಮ ಬಳಿ ಏನೇ ಇದ್ದರೂ ಕೂಡ ಅದು ದೇವರ ಆಶೀರ್ವಾದದಿಂದ ಪ್ರಾಪ್ತಿಯಾಗಿರುತ್ತದೆ. ಆದರೆ, ವ್ಯಕ್ತಿ ತನ್ನ ಬಳಿ ಇರುವ ಸಂಪತ್ತಿನ ಅಹಂಕಾರದಿಂದ ಎಂದಿಗೂ ವರ್ತಿಸಬಾರದು. ಈ ರೀತಿಯ ಅಹಂಕಾರ ವ್ಯಕ್ತಿಯನ್ನು ಅವನತಿಯತ್ತ ಕೊಂಡೊಯ್ಯುತ್ತದೆ ಎನ್ನಲಾಗುತ್ತದೆ. 

ಗರುಡ ಪುರಾಣದ ಪ್ರಕಾರ, ನಾವು ಯಾವುದೇ ವಿಚಾರದಲ್ಲಿ ಬಲಾಢ್ಯರಾಗಿದ್ದರೂ ಕೂಡ ಕೈಲಾಗದವರನ್ನು, ಶ್ರಮ ಜೀವಿಗಳನ್ನು ಎಂದಿಗೂ ಶೋಷಿಸಬಾರದು. ಬಡವರು ಮತ್ತು ನಿರ್ಗತಿಕರನ್ನು ಶೋಷಿಸಿ ಸಂಪಾದಿಸಿದ ಹಣ ಹೆಚ್ಚು ಸಮಯ ಉಳಿಯುವುದಿಲ್ಲ. 

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯು ಎಂದಿಗೂ ಕೂಡ ಕೊಳಕನ್ನು ಸಹಿಸುವುದಿಲ್ಲ. ಕೊಳಕು, ಗಲೀಜು ಇರುವ ಜಾಗದಲ್ಲಿ ಕ್ಷಣ ಕಾಲವೂ ನಿಲ್ಲಲು ಬಯಸುವುದಿಲ್ಲ. ಹಾಗಾಗಿ, ಶುಚಿಯಾಗಿಲ್ಲದ, ಮನೆಯನ್ನು ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡದ ಮನೆಯಲ್ಲಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಇದು ವ್ಯಕ್ತಿಯ ಬಡತನಕ್ಕೆ ಕಾರಣವಾಗುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link