ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !
ಮಧುಮೇಹದಂತಹ ಅಪಾಯಕಾರಿ ಕಾಯಿಲೆಯನ್ನು ದೂರ ತಳ್ಳಬೇಕಾದರೆ ನಾವು ಸೇವಿಸುವ ಆಹಾರದತ್ತ ಗಮನ ಹರಿಸುವುದು ಬಹಳ ಮುಖ್ಯ.
ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಪೇರಳೆಯಲ್ಲಿ ವಿಟಮಿನ್-ಸಿ,ವಿಟಮಿನ್-ಬಿ,ವಿಟಮಿನ್-ಎ ಮತ್ತು ರಂಜಕ ಸಮೃದ್ಧವಾಗಿದೆ. ಪೇರಳೆಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ.
ಪೇರಳೆ ಹಣ್ಣು ಮಾತ್ರ ಅಲ್ಲ ಅದರ ಎಲೆಗಳು ಕೂಡಾ ಮಧುಮೇಹ ರೋಗಿಗಳಿಗೆ ಸಂಜೀವಿನಿ ಇದ್ದ ಹಾಗೆ.ಗ್ಲೂಕೋಸ್ ಮಟ್ಟವನ್ನು ನಾರ್ಮಲ್ ಆಗಿ ಇಡುತ್ತದೆ.
ಪೇರಳೆ ಹಣ್ಣು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.ಅಂದಹಾಗೆ ಇಲ್ಲಿ ನೆನಪಿಡಬೇಕಾದ ವಿಷಯ ಎಂದರೆ ಈ ಹಣ್ಣನ್ನು ತಿನ್ನುವಾಗ ಸಿಪ್ಪೆ ಸಮೇತ ತಿನ್ನಬೇಕು
ವಾರದಲ್ಲಿ ಎರಡು ದಿನ ಊಟವಾದ ನಂತರ ಪೇರಳೆ ಹಣ್ಣನ್ನು ಸೇವಿಸಬೇಕು.ಇದು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಯೇ ಇಡಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.