Paytm ಬಳಸಿ ಎರಡೇ ನಿಮಿಷಗಳಲ್ಲಿ ಪಡೆಯಿರಿ ಪರ್ಸನಲ್ ಲೋನ್

Thu, 07 Jan 2021-10:58 am,

Paytm Personal Loan: ವೈಯಕ್ತಿಕ ಸಾಲ ತೆಗೆದುಕೊಳ್ಳಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ, ನೀವು ಈ ಕೆಲಸವನ್ನು Paytm ನಿಂದಲೂ ಮಾಡಬಹುದು. Paytm ತನ್ನ ಗ್ರಾಹಕರಿಗೆ Paytm ಸಾಲ ನೀಡುವ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇದರ ಸಹಾಯದಿಂದ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಕಂಪನಿಯ ಟೆಕ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸೇವೆಯನ್ನು ನಿರ್ಮಿಸಲಾಗಿದೆ ಎಂದು ಪೇಟಿಎಂ ಹೇಳಿದೆ.  

Paytm Lending ಮೂಲಕ ಯಾವುದೇ ಬಳಕೆದಾರರು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪಾಲುದಾರ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನಿಮಗಾಗಿ ಸಾಲ ಪ್ರಕ್ರಿಯೆಯನ್ನು ಕೇವಲ 2 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತವೆ. ಈ ಹೊಸ ಸೇವೆಯ ಬಗ್ಗೆ Paytm ಹೇಳುವಂತೆ ಮಾರ್ಚ್ 2021 ರೊಳಗೆ 1 ಮಿಲಿಯನ್ ಬಳಕೆದಾರರನ್ನು ಸೇರಿಸುವುದು ಇದರ ಗುರಿಯಾಗಿದೆ.

ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳು ಸೇರಿದಂತೆ ನೀವು 24x7 Paytm ಸಾಲ  ಸೌಲಭ್ಯವನ್ನು ಸಹ ಪಡೆಯಬಹುದು. Paytm ಈ ಸೇವೆಯನ್ನು ಸಂಬಳ ಹೊಂದಿರುವ ಖಾತೆದಾರರು, ಸಣ್ಣ ವ್ಯಾಪಾರ ಮಾಲೀಕರು ಮತ್ತು ವೃತ್ತಿಪರರಿಗಾಗಿ ಪ್ರಾರಂಭಿಸಿದೆ. ಸಣ್ಣ ನಗರಗಳಿಂದ ಬರುವ ಮತ್ತು ದೊಡ್ಡ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳಲು ಸಾಧ್ಯವಾಗದ ಬಳಕೆದಾರರಿಗೆ Paytm ನ ಈ ಸೇವೆಯು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ : Paytm ಪಾವತಿಯಲ್ಲಿ ಪಡೆಯಿರಿ ಇನ್ನಷ್ಟು ಲಾಭ, ಕಂಪನಿ ನೀಡಿದೆ ಈ ಆಫರ್

Paytm ನೊಂದಿಗೆ ನೀವು ಕೇವಲ 2 ನಿಮಿಷಗಳಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ನೀವು ಅದನ್ನು 18 ರಿಂದ 36 ತಿಂಗಳೊಳಗೆ ಅನುಕೂಲಕರ ಇಎಂಐ (EMI)ನಲ್ಲಿ ಭರ್ತಿ ಮಾಡಬಹುದು. ಪೇಟಿಎಂ ಸಿಇಒ ಭಾವೇಶ್ ಗುಪ್ತಾ ಮಾತನಾಡಿ ಅವರ ಕನಸುಗಳನ್ನು ಈಡೇರಿಸಲು ಬಯಸುವವರಿಗೆ ನಾವು ಈ ಸೌಲಭ್ಯವನ್ನು ಪ್ರಾರಂಭಿಸಿದ್ದೇವೆ. ಅಲ್ಪಾವಧಿಯ ಸಾಲವನ್ನು ತಕ್ಷಣ ಬಯಸುವ ಕಾರ್ಮಿಕ ವೃತ್ತಿಪರರು, ಹೊಸ ಸಾಲಗಾರರು ಮತ್ತು ಯುವ ವೃತ್ತಿಪರರಿಗೆ ಈ ಸೌಲಭ್ಯವು ಪ್ರಯೋಜನಕಾರಿಯಾಗಿದೆ. ಇದು ಅವರ ತಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ಸಾಲ ತೆಗೆದುಕೊಳ್ಳಲು ಬಯಸುವ ಗ್ರಾಹಕರು Paytm ಅಪ್ಲಿಕೇಶನ್‌ಗೆ ಹೋಗಿ. ಅಲ್ಲಿ ಹಣಕಾಸು ಸೇವೆಗಳ ವಿಭಾಗಕ್ಕೆ ಹೋಗಿ ನಂತರ ವೈಯಕ್ತಿಕ ಸಾಲಗಳ ಟ್ಯಾಬ್ ಅನ್ನು ಕ್ಲಿಕ್ ಮಾಡುವುದರಿಂದ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಬೀಟಾ ಹಂತದಲ್ಲಿ ಕಂಪನಿಯು ಆಯ್ದ 400 ಗ್ರಾಹಕರಿಗೆ ಸಾಲ ನೀಡಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link