CIBIL ಸ್ಕೋರ್, ಆದಾಯ ಪುರಾವೆ ಇಲ್ಲದಿದ್ದರೂ ಸಿಗುತ್ತೆ ಸಾಲ!

Tue, 28 Nov 2023-2:45 pm,

ಹಠಾತ್ ಹಣಕಾಸಿನ ಅವಶ್ಯಕತೆ ಎದುರಾದಾಗ ಮೊದಲು ತಲೆಗೆ ಬರುವುದು ವೈಯಕ್ತಿಕ ಸಾಲ ಎಂದರೆ ಪರ್ಸನಲ್ ಲೋನ್. ಆದರೆ, ಪರ್ಸನಲ್ ಲೋನ್ ನಲ್ಲಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅದರ ಬಡ್ಡಿದರವೂ ಹೆಚ್ಚಿರುತ್ತದೆ. ಮಾತ್ರವಲ್ಲ, ಇದನ್ನು ನೀವು ಯಾವುದೇ ಟಾಕ್ಸ್ ನಲ್ಲೂ ತೋರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನೀವು ಲೋನ್ ತೆಗೆದುಕೊಳ್ಳಲು ಲಭ್ಯವಿರುವ ಇತರ ಆಯ್ಕೆಗಳ ಬಗ್ಗೆ ಪರಿಶೀಲಿಸುವುದು ನಿಮಗೆ ಒಳ್ಳೆಯ ಆಯ್ಕೆ ಆಗಿದೆ. 

ಗಮನಾರ್ಹವಾಗಿ, ಯಾವುದೇ ಲೋನ್ ಕೊಳ್ಳುವಾಗ ಸಿಬಿಲ್ ಸ್ಕೋರ್, ಆದಾಯ ಪುರಾವೆ ಬಹಳ ಮುಖ್ಯ. ಇಲ್ಲದಿದ್ದರೆ ಬ್ಯಾಂಕಿಂಗ್ ಲೋನ್ ಪಡೆಯುವಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. 

ಸಿಬಿಲ್ ಸ್ಕೋರ್ ಕಡಿಮೆ ಇದ್ದಾಗ ಅಂತಹ ಜನರು  ಬ್ಯಾಂಕ್ ನಿಂದಾಗಲಿ ಅಥವಾ ಎನ್‌ಬಿ‌ಎಫ್‌ಸಿಯಿಂದಾಗಲಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. 

ಆದಾಗ್ಯೂ, ಯಾವುದೇ ಸಿಬಿಲ್ ಸ್ಕೋರ್, ಆದಾಯ ಪುರಾವೆಯ ಅಗತ್ಯವಿಲ್ಲದೆಯೂ ನೀವು ಕೈಗೆಟುಕುವ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು. ಅದು ನಿಮ್ಮ ಬಳಿಯಿರುವ ಚಿನ್ನದ ಸಾಲ. 

ನೀವು ನಿಮ್ಮ ಬಳಿಯಿರುವ ಚಿನ್ನವನ್ನು ಅಡಮಾನ ಇಡುವ ಮೂಲಕ ಸುಲಭವಾಗಿ ಸಾಲ ಪಡೆಯಬಹುದು. ಗೋಲ್ಡ್ ಲೋನ್ ಪಡೆಯಲು ಯಾವುದೇ ಸಿಬಿಲ್ ಸ್ಕೋರ್ ಅಥವಾ ಇನ್ಕಮ್ ಪ್ರೂಫ್ ಅಗತ್ಯವಿರುವುದಿಲ್ಲ. ಅಷ್ಟೇ ಅಲ್ಲ, ಇದರ ಬಡ್ಡಿ ದರವೂ ಕಡಿಮೆ ಇರುತ್ತದೆ. 

ಗೋಲ್ಡ್ ಲೋನ್ ನಲ್ಲಿ ನಿಮ್ಮ ಬಳಿ ಇರುವ ಚಿನ್ನವನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಸುಮಾರು 50 ಲಕ್ಷ ರೂ.ವರೆಗೂ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link