Home Remedy For Hangover: ಕ್ಷಣಾರ್ಧದಲ್ಲಿ ಹ್ಯಾಂಗೋವರ್ ಇಳಿಸಬೇಕೇ... ಇಲ್ಲಿವೆ ಮನೆ ಉಪಾಯ!
ನಿಂಬೆಹಣ್ಣು - ಮದ್ಯದ ಅಮಲು ಹೋಗಲಾಡಿಸಲು ನಿಂಬೆರಸ ತುಂಬಾ ಸಹಕಾರಿಯಾಗಿದೆ. ಲೆಮನ್ ಟೀ ಕುಡಿಯುವ ಮೂಲಕವೂ ಹ್ಯಾಂಗೊವರ್ ನಿವಾರಣೆಯಾಗುತ್ತದೆ. ಇದು ಆಲ್ಕೋಹಾಲ್ ಅನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ ಮತ್ತು ತ್ವರಿತ ಪರಿಹಾರವನ್ನು ನೀಡುತ್ತದೆ. ಒಂದು ಲೋಟ ತಣ್ಣೀರಿಗೆ ನಿಂಬೆರಸ ಬೆರೆಸಿ ಕುಡಿದರೆ, ಅಮಲು ದೂರಾಗುತ್ತದೆ.
ಶುಂಠಿ- ಕುಡಿತದ ನಂತರ ಉಂಟಾಗುವ ಚಡಪಡಿಕೆಯನ್ನು ಹೋಗಲಾಡಿಸುವ ಔಷಧೀಯ ಗುಣಗಳು ಶುಂಠಿಯಲ್ಲಿವೆ. ಮದ್ಯದ ಅಮಲು ಹೋಗಲಾಡಿಸಲು ಇದು ತುಂಬಾ ಉಪಯುಕ್ತವಾಗಿದೆ. ಶುಂಠಿ ಆಲ್ಕೋಹಾಲ್ ಅನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುತ್ತದೆ, ಇದರಿಂದಾಗಿ ಹ್ಯಾಂಗೊವರ್ ಬೇಗ ಇಳಿದುಹೋಗುತ್ತದೆ.
ಪುದೀನಾ- ಬಿಸಿ ನೀರಿನಲ್ಲಿ 3 ರಿಂದ 4 ಪುದೀನಾ ಎಲೆಗಳನ್ನು ಸೇರಿಸಿ ಕುಡಿಯಿರಿ, ಮದ್ಯದ ಅಮಲು ಇಳಿದು ಹೋಗುತ್ತದೆ. ಇದನ್ನು ಬಳಸುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಕೂಡ ನಿವಾರನೆಯಾಗುತ್ತದೆ. ಇದಲ್ಲದೆ ಇದರಿಂದ ಕರುಳುಗಳು ಸಾಕಷ್ಟು ಪರಿಹಾರವನ್ನು ಪಡೆಯುತ್ತವೆ. ಹ್ಯಾಂಗೊವರ್ ತೊಡೆದುಹಾಕಲು ಪುದೀನಾ ಸುಲಭವಾದ ಮಾರ್ಗವಾಗಿದೆ.
ಜೇನು- ಮದ್ಯದ ದುಷ್ಪರಿಣಾಮಗಳನ್ನು ತೆಗೆದುಹಾಕುವಲ್ಲಿ ಜೇನುತುಪ್ಪವು ಪರಿಣಾಮಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದಾಗಿ ಆಲ್ಕೋಹಾಲ್ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹ್ಯಾಂಗೊವರ್ ಕ್ಷಣಾರ್ಧದಲ್ಲಿ ಇಳಿಯುತ್ತದೆ.
ಹಣ್ಣುಗಳು- ನೀವು ಹ್ಯಾಂಗೊವರ್ ಅನ್ನು ತೊಡೆದುಹಾಕಲು ಬಯಸಿದರೆ ಹಣ್ಣುಗಳು ಸಹ ಪ್ರಯೋಜನಕಾರಿಯಾಗಿವೆ. ಆರೋಗ್ಯ ತಜ್ಞರ ಪ್ರಕಾರ ಸೇಬು ಮತ್ತು ಬಾಳೆಹಣ್ಣು ಮದ್ಯದ ಅಮಲು ಹೋಗಲಾಡಿಸಲು ತುಂಬಾ ಸಹಕಾರಿಯಾಗಿವೆ. ತಲೆನೋವಿನಲ್ಲಿ ಸೇಬು ತುಂಬಾ ಪ್ರಯೋಜನಕಾರಿ. ಬಾಳೆಹಣ್ಣಿನ ಶೇಕ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಹ್ಯಾಂಗೊವರ್ ನಿವಾರಣೆಯಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)