ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಹನಿ ತುಪ್ಪ ಸವರಿ ಮಲಗಿದ್ರೆ ಏನಾಗುತ್ತೆ ಗೊತ್ತಾ?
ಆಯುರ್ವೇದದ ಪ್ರಕಾರ, ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಒಂದು ಹನಿ ತುಪ್ಪ ಸವರುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳಿವೆ ಎನ್ನಲಾಗುತ್ತದೆ.
ತುಪ್ಪದಲ್ಲಿ ದೇಹಕ್ಕೆ ಉಪಯುಕ್ತವಾದ ವಿಟಮಿನ್ ಎ, ಇ, ಡಿ, ಕೆ ಜೊತೆಗೆ ಬ್ಯುಟರಿಕ್ ಎಂಬ ಆಮ್ಲವನ್ನು ಹೊಂದಿದೆ. ಇದರಲ್ಲಿರುವ ಖನಿಜಾಂಶಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನಿತ್ಯ ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಹನಿ ತುಪ್ಪ ಹಾಕಿ ಮಲಗಿದರೆ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
ರಾತ್ರಿ ವೇಳೆ ಹೊಕ್ಕಳಿಗೆ ತುಪ್ಪ ಸವಾರಿ ಮಲಗಿದರೆ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ. ಆದರೆ, ಕೆಲವರಿಗೆ ಎಲ್ಲಾ ಋತುವಿನಲ್ಲೂ ಹೆಚ್ಚು ನೀರು ಕುಡಿದರೂ, ತುಟಿಗೆ ಆರೈಕೆ ಮಾಡಿದರೂ ಸಹ ತುಟಿ ಒಡೆಯುವ ಸಮಸ್ಯೆ ಇರುತ್ತದೆ. ಅಂತಹವಋ ಹೊಕ್ಕಳಿಗೆ ತುಪ್ಪ ಸವರುವುದರಿಂದ ಪರಿಹಾರ ಪಡೆಯಬಹುದು.
ಪ್ರತಿ ನಿತ್ಯ ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಒಂದನಿ ತುಪ್ಪ ಸವರಿ ಮಲಗುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.
ನಿತ್ಯ ಹೊಕ್ಕಳಿಗೆ ತುಪ್ಪ ಸವರಿ ಮಲಗುವುದರಿಂದ ಕೂದಲಿನ ಗುಣಮಟ್ಟ ಕಾಪಾಡಿಕೊಳ್ಳಬಹುದು. ಕೂದಲು ಉದುರುವ ಸಮಸ್ಯೆ ನಿವಾರಿಸಿ, ಕೂದಲು ಹೊಳೆಯುವಂತೆ ಮಾಡುವುದರ ಜೊತೆಗೆ ಕೂದಲಿನ ಹಲವು ಸಮಸ್ಯೆಗಳು ಬಗೆ ಹರಿಯುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.