ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನು ಮೀರಿಸುತ್ತಾರೆ Shreyas Iyer ಸಹೋದರಿ
ಶ್ರೇಯಸ್ ಅಯ್ಯರ್ ಅವರ ತಂಗಿ ಶ್ರೇಷ್ಠಾ ಅಯ್ಯರ್ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡಿದರೆ, ಅವರು ತಮ್ಮ ಸಹೋದರನಂತೆಯೇ ಸಿಕ್ಕಾಪಟ್ಟೆ ಕ್ರೇಜಿ ಎನ್ನುವುದು ತಿಳಿಯುತ್ತದೆ.
ಏಪ್ರಿಲ್ 29 ರಂದು ಶ್ರೇಷ್ಠಾ ಅಯ್ಯರ್ ತಮ್ಮ ಜನ್ಮದಿನವನ್ನು ಆಚರಿಸುತ್ತಾರೆ. ಅವರ ತಂದೆ ಸಂತೋಷ್ ಅಯ್ಯರ್ ಕೇರಳದ ತ್ರಿಶೂರ್ ಜಿಲ್ಲೆಯವರು, ತಾಯಿ ರೋಹಿಣಿ ಅಯ್ಯರ್ ಮೂಲತಃ ಕರ್ನಾಟಕದ ಮಂಗಳೂರಿನವರು.
ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಈ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 44 ಸಾವಿರಕ್ಕೂ ಹೆಚ್ಚು ಫಾಲ್ಲೋವೆರ್ಸ್ ಇದ್ದಾರೆ.
ಶ್ರೇಷ್ಟಾ ಅಯ್ಯರ್ ಅವರು ತಮ್ಮ ಡ್ಯಾನ್ಸ್ ವೀಡಿಯೊಗಳು ಮತ್ತು ರೀಲ್‌ಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ಇದನ್ನು ಅವರ ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.
ಶ್ರೇಯಸ್ ಅಯ್ಯರ್ ಮತ್ತು ಶ್ರೇಷ್ಠಾ ಅಯ್ಯರ್ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಥ್ರೋಬ್ಯಾಕ್ ಮತ್ತು ಇತ್ತೀಚಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಶ್ರೇಷ್ಠಾ ಯಾವಾಗಲೂ ತನ್ನ ಸಹೋದರನನ್ನು ತನ್ನ ವೃತ್ತಿಜೀವನದಲ್ಲಿ ಬೆಂಬಲಿಸುತ್ತಾಳೆ.