ಶುಕ್ರ-ಶನಿ ಮೈತ್ರಿ: ವರ್ಷಾಂತ್ಯದಲ್ಲಿ ಈ 3 ರಾಶಿಯ ಜನರಿಗೆ ಒಲಿಯಲಿದ್ದಾಳೆ ತಾಯಿ ಲಕ್ಷ್ಮಿ, ತುಂಬಲಿದೆ ಖಜಾನೆ

Wed, 04 Sep 2024-6:51 am,

ನವಗ್ರಹಗಳಲ್ಲಿ ಸುಖ, ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರಗ್ರಹವು ಪ್ರತಿ 26 ದಿನಗಳಿಗೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. 

ಶುಕ್ರನು  ಡಿಸೆಂಬರ್ 28, 2024 ರಂದು ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 

ಪ್ರಸ್ತುತ ಶನಿಯೂ ಕುಂಭ ರಾಶಿಯಲ್ಲೇ ಉಪಸ್ಥಿತನಿರುವುದರಿಂದ ಕುಂಭ ರಾಶಿಯಲ್ಲಿ ಶುಕ್ರ ಶನಿಯ ಮೈತ್ರಿ ಏರ್ಪಡಲಿದೆ. 

ಶುಕ್ರ-ಶನಿ ಮೈತ್ರಿಯು ಎಲ್ಲಾ 12 ರಾಶಿಯವರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದರೆ ವರ್ಷಾಂತ್ಯದಲ್ಲಿ ಶನಿ-ಶುಕ್ರರ ಯುತಿಯು ಮೂರು ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ.

ಶುಕ್ರ ಶನಿ ಗ್ರಹಗಳ ಮೈತ್ರಿ ಈ ರಾಶಿಯ ಜನರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸು, ಕೀರ್ತಿಯನ್ನು ನೀಡಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ಭೌತಿಕ ಸುಖಗಳು ವೃದ್ಧಿಯಾಗಲಿವೆ. 

ಸ್ವ ರಾಶಿಯಲ್ಲಿ ಎರಡು ಬಲಿಷ್ಠ ಗ್ರಹಗಳ ಮೈತ್ರಿ ಈ ರಾಶಿಯ ಜನರಿಗೆ ವಿಶೇಷ ಲಾಭವನ್ನು ತರಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಗೆಹರಿದು ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ಉದ್ಯಮಿಗಳು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 

ಶುಕ್ರ ಶನಿಯ ಯುತಿಯಿಂದ ಈ ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಲಭಿಸಿ ಖಜಾನೆ ಭರ್ತಿಯಾಗಲಿದೆ. ವೃತ್ತಿ ಬದುಕಿನಲ್ಲೂ ಹೊಸ ಉತ್ತುಂಗಕ್ಕೆ ಏರುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link