ಶ್ರಾವಣ ಹುಣ್ಣಿಮೆಯಂದು ಈ ಮಂತ್ರ ಪಠಿಸಿದರೆ ಸಮೃದ್ಧಿ ಜೊತೆ ಅಖಂಡ ವರವನ್ನೇ ಕರುಣಿಸುವರು ತಾಯಿ ಮಹಾಲಕ್ಷ್ಮೀ

Wed, 30 Aug 2023-6:11 am,

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶ್ರಾವಣ ಪೂರ್ಣಿಮೆ ದಿನದಂದು ಕೈಗೊಳ್ಳಲಾದ ಕೆಲವು ಕ್ರಮಗಳು ಮತ್ತು ಪಠಿಸಬೇಕಾದ ಮಂತ್ರಗಳು ಲಕ್ಷ್ಮಿ ದೇವಿಯನ್ನು ಮೆಚ್ಚಿಸಿ ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಣ್ಣಿಮೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ.

ಶ್ರಾವಣ ಹುಣ್ಣಿಮೆಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಅಷ್ಟಏ ಅಲ್ಲದೆ, ಈ ಸಂದರ್ಭದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ, ಇದನ್ನು ಕ್ರಮಬದ್ಧವಾಗಿ ಮಾಡಿದರೆ ವ್ಯಕ್ತಿಗೆ ಸಂಪತ್ತಿನ ಸುಧೆಯನ್ನೇ ಹರಿಸುತ್ತಾರೆ. ಜೊತೆಗೆ ಸಕಲ ಸಮಸ್ಯೆಗೂ ಮುಕ್ತಿ ಸಿಗಲಿದೆ ಎಂದು ಹೇಳಲಾಗುತ್ತದೆ.

ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ, ಶ್ರಾವಣ ಹುಣ್ಣಿಮೆಯಂದು ಈ ಕ್ರಮ ಕೈಗೊಳ್ಳಿ. ಇದು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ದಿನದಂದು ದಂಪತಿಗಳು ಸಕ್ಕರೆ ಮತ್ತು ಅಕ್ಕಿಯನ್ನು ಹಸಿ ಹಾಲಿನಲ್ಲಿ ಬೆರೆಸಿ ಚಂದ್ರನಿಗೆ ಅರ್ಘ್ಯವಾಗಿ ಅರ್ಪಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ಕ್ರಮದ ಜೊತೆ ‘ಓಂ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಚಂದ್ರಂಸೇ ನಮಃ’ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ, ವ್ಯಕ್ತಿಯ ಆರ್ಥಿಕ ಸ್ಥಿತಿಯು ಶೀಘ್ರದಲ್ಲೇ ಸುಧಾರಿಸುತ್ತದೆ.

ಶ್ರಾವಣ ಹುಣ್ಣಿಮೆಯಂದು 11 ನಾಣ್ಯಗಳನ್ನು ತೆಗೆದುಕೊಂಡು ಅದರ ಮೇಲೆ ಅರಿಶಿನವನ್ನು ಹಚ್ಚಿ. ಬಳಿಕ ಅದನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿ. ಬಳಿಕ ತುಪ್ಪದ ದೀಪವನ್ನು ಹಚ್ಚಿ, ಲಕ್ಷ್ಮಿ ಚಾಲೀಸಾವನ್ನು ಪಠಿಸಿ. ಪೂಜೆಯ ನಂತರ, ಈ ನಾಣ್ಯಗಳನ್ನು ಹಣವನ್ನು ಇಡುವ ಸ್ಥಳದಲ್ಲಿ ಅಥವಾ ಕಮಾನಿನಲ್ಲಿ ಇರಿಸಿ. ಇದರಿಂದ ವ್ಯಕ್ತಿಯ ಸಂಪತ್ತು ಹೆಚ್ಚುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಶ್ರಾವಣ ಹುಣ್ಣಿಮೆ ಜೊತೆಗೆ ಗಾಯತ್ರಿ ಜಯಂತಿಯನ್ನೂ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು, ತಾಯಿ ಗಾಯತ್ರಿಯ ವಿಗ್ರಹ ಅಥವಾ ಚಿತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ. ಅಷ್ಟೇ ಅಲ್ಲ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡಿದರೆ ವ್ಯಕ್ತಿಯ ಎಲ್ಲಾ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link