Gold Rate Today: ಆಭರಣ ಪ್ರಿಯರಿಗೆ ಬಿಗ್‌ ಶಾಕ್‌! ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

Mon, 14 Oct 2024-7:51 am,

Gold rate today: ಭಾರತೀಯರು ಚಿನ್ನವನ್ನು ತುಂಬಾ ಪ್ರೀತಿಸುತ್ತಾರೆ. ಅದರಲ್ಲೂ ಹಬ್ಬ ಹರಿದಿನಗಳು ಬಂದರೆ ಸಾಕು ಚಿನ್ನಾಭರಣವನ್ನು ಖರೀದಿಸುವುದಕ್ಕಾಗಿ ಕಾಯುತ್ತಾ ಕೂರುತ್ತಾರೆ. ಆಭರಣಗಳು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಮುಖ್ಯ ಪಾತ್ರ ವಹಿಸುತ್ತೆವ ಅಂತಲೇ ಹೇಳಬಹುದು.   

ಭಾರತದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ, ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹಬ್ಬದ ಸಮಯದಲ್ಲಂತೂ ಆಭರಣಗಳಿಗೆ ಮತ್ತಷ್ಟು ಡಿಮ್ಯಾಂಡ್‌ ಹೆಚ್ಚಾಗುತ್ತದೆ ಅಂತಲೇ ಹೇಳಬಹುದು. ಆದರೆ ಬೇಡಿಕೆಗೆ ತಕ್ಕಂತೆ ಚಿನ್ನದ ಬೆಲೆ ಕೂಡ ಅಧಿಕವಾಗಿಯೇ ಇದೆ.   

ಇತ್ತೀಚೆಗಷ್ಟೆ ದೇಶೀಯವಾಗಿ ಕೇಂದ್ರ ಸರ್ಕಾರದ ಬಜೆಟ್ ಮಂಡಣೆ ಮಾಡಿದಾಗ, ಚಿನ್ನ, ಬೆಳ್ಳಿಯಂತಹ ಲೋಹಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿತ್ತು. ಚಿನ್ನದ ಬೆಲೆ ಕೂಡ ಸ್ವಲ್ಪ ದಿನಗಳ ಕಾಲ ಕುಸಿತ ಕಂಡಿತ್ತು. ಆದರೆ, ಈ ಸಂತೋಷ ಹೆಚ್ಚು ದಿನಗಲ ಕಾಲ ಉಳಿಯಲಿಲ್ಲ.   

ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧರ ಕೈಗೊಳ್ಳುವುದರೊಂದಿಗೆ, ಚಿನ್ನದ ಬೆಲೆ ಆಗಸಕ್ಕೆ ಏರಿದೆ. ಆದರೆ, ಸ್ವಲ್ಪ ದಿನಗಳ ಕಾಲ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇತ್ತೀಚೆಗಷ್ಟೆ ಅಲ್ಪ ಮಟ್ಟಿಗೆ ಕುಸಿತ ಕಂಡಿತ್ತು. ಆದರೆ ಹಬ್ಬ ಮುಗಿಯುತ್ತಿದ್ದಂತೆ ಚಿನ್ನದ ಬೆಲೆ ಮತ್ತೆ ಆಗಸಕ್ಕೆ ಚಿಗಿದಿದೆ.  

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ ಗೆ 2650 ಡಾಲರ್ ತಲುಪಿದೆ. ಇನ್ನೂ ದೇಶೀಯ ಮಾರುಕಟ್ಟೆಗೆ ಬಂದರೆ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ, ಪ್ರತಿ 10 ಗ್ರಾಂಗೆ 700 ರೂ. ಏರಿಕೆಯಾಗಿದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 70,950 ರೂ, ಗೆ ಏರಿಕೆಯಾಗಿದೆ.   

ಇನ್ನೂ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ ಮೇಲೆ 760 ರೂ. ಏರಿಕೆಯಾಗಿದ್ದು, 10 ಗ್ರಾಂನ 24 ಕ್ಯಾರಟ್‌ನ ಚಿನ್ನದ ಬೆಲೆ 77,400 ರೂ, ಗೆ ಏರಿಕೆಯಾಗುವ ಮೂಲಕ, ಆಭರಣ ಕೊಳ್ಳುವ ಆಸೆಯಲ್ಲಿದ್ದ ಲೋಹದ ಪ್ರಿಯರಿಗೆ ಶಾಕ್‌ ಕೊಟ್ಟಿದೆ.   

ಇನ್ನೂ, ದೇಶದ ಹಲವೆಡೆ ಇದೇ ಬೆಲೆ ಮುಂದುವರೆದಿದ್ದು, ಇನ್ನೂ ಮುಂದೆಯಾದರೂ ಚಿನ್ನದ ಬೆಲೆ ಕುಸಿತ ಕಂಡು ಆಭರಣ ಪ್ರಿಯರನ್ನು ನಿಟ್ಟುಸಿರು ಬಿಡುವಂತೆ ಮಾಡುತ್ತಾ ಅಥವಾ ಮತ್ತೆ ಬೆಲೆ ಏರಿಕೆ ಮೂಲಕ ಶಾಕ್‌ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link