ನಾಮಿನೇಟ್ ಆಗದೇ ಕ್ಯಾಪ್ಟನ್ ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?
Gold Suresh Elimination Reason: ಬಿಗ್‌ಬಾಸ್ ಕನ್ನಡ ಸೀನಸ್ 11 ರಿಂದ ನಾಮೆನೇಟ್ ಆಗದೇ ಇದ್ದರು ಗೋಲ್ಡ್ ಸುರೇಶ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
ಬಿಗ್‌ಬಾಸ್ ಕನ್ನಡ ಸೀಸನ್ 11 ರ 11 ನೇ ವಾರ ಮುಗಿದಿದೆ. ಈ ಸಮಯದಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಗೋಲ್ಡ್ ಸುರೇಶ್ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಬಹುದಿನಗಳಿಂದ ಕ್ಯಾಪ್ಟನ್ ಆಗಬೇಕೆಂಬ ಅವರ ಆಸೆ ಈ ವಾರ ಈಡೇರಿತ್ತು.
ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ನಿಂದಲೂ ಬಚಾವ್ ಆಗಿ ಸೇಫ್ ಆಗಿದ್ದರು. ಹೀಗಿದ್ದಾಗಿಯೂ ಸುರೇಶ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಗೋಲ್ಡ್ ಸುರೇಶ್ ತಮ್ಮದೇ ರೀತಿಯಲ್ಲಿ ಬಿಗ್ ಬಾಸ್ ಆಟವನ್ನು ತುಂಬಾ ಉತ್ತಮವಾಗಿ ಆಡುತ್ತಿದ್ದರು. ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.
ಗೋಲ್ಡ್ ಸುರೇಶ್ ಅವರ ಆಟವನ್ನು ಬಿಗ್ ಬಾಸ್ ವೀಕ್ಷಕರು ಸಹ ಮೆಚ್ಚಿಕೊಂಡಿದ್ದರು. ಅವರು ಸಹ ಫಿನಾಲೆಗೆ ಎಂಟ್ರಿಕೊಡಬಹುದು ಎಂದುಕೊಂಡಿದ್ದರು.
ಆದರೆ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ವ್ಯಯಕ್ತಿಕ ಕಾರಣಗಳಿಂದ ಅನಿವಾರ್ಯವಾಗಿ ಸುರೇಶ್ ಬಿಗ್ ಬಾಸ್ ಬಿಟ್ಟು ಬರಬೇಕಾಯಿತು ಎಂದು ಹೇಳಲಾಗುತ್ತಿದೆ.
ಸುರೇಶ್ ವಾರಕ್ಕೆ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರೆಂದು ಹೇಳಲಾಗಿದೆ. ಈ ಪ್ರಕಾರ 11 ವಾರಕ್ಕೆ ಅವರ ಒಟ್ಟು ಸಂಭಾವನೆ 3,85,000 ರೂಪಾಯಿ ಆಗಿದೆ. (ಇದು ವರದಿಗಳು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸಂಭಾವನೆಯಾಗಿದೆ. ಅಧಿಕೃತ ಮಾಹಿತಿಯಲ್ಲ.)