ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಶಾಕಿಂಗ್ ಬೆಳವಣಿಗೆಯೊಂದರಲ್ಲಿ ನಾಮಿನೇಟ್ ಕೂಡ ಆಗಿರದ ಅತ್ಯಂತ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಇದ್ದಕ್ಕಿದ್ದಂತೆ ಹೊರಬರಬೇಕಾಯಿತು. ಇದರ ಬೆನ್ನಲ್ಲೇ ವದಂತಿಗಳು ಹರಡಿದ್ದು ಈ ಕುರಿತಂತೆ ಗೋಲ್ಡ್ ಸುರೇಶ್ ಜೀ ಕನ್ನಡ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಬಲಿಷ್ಠ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಗೋಲ್ಡ್ ಸುರೇಶ್ ಈ ವಾರ ಕ್ಯಾಪ್ಟನ್ ಸಹ ಆಗಿದ್ದರು.
'ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಗ್‌ಬಾಸ್ ಮನೆಗಿಂತಲೂ ಸದ್ಯ ಅವರ ಕುಟುಂಬದವರಿಗೆ ಅವರ ಅವಶ್ಯಕತೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ಅವರು ತಡಮಾಡದೆ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬರಬೇಕು' ಎಂದು ಬಿಗ್‌ಬಾಸ್ ಆದೇಶಿಸುತ್ತಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ದಿಢೀರನೆ ಗೋಲ್ಡ್ ಸುರೇಶ್ ಹೊರಬಂದಿದ್ದರ ಬಗ್ಗೆ ಹಲವು ವದಂತಿಗಳು ಕೂಡ ಕೇಳಿಬಂದಿದ್ದವು. ಇದರಲ್ಲಿ ಗೋಲ್ಡ್ ಸುರೇಶ್ ಅವರ ತಂದೆ ಮೃತಪಟ್ಟಿದ್ದಾರೆ ಎಂಬುದು ಒಂದು ವದಂತಿಯಾದರೆ, ಅವರು ಬ್ಯುಸಿನೆಸ್ ನಲ್ಲಿ ಲಾಸ್ ಆಗಿರುವುದರಿಂದ ಬಿಗ್‌ಬಾಸ್ ಬಿಟ್ಟು ಹೊರಬಂದಿದ್ದಾರೆ ಎಂಬ ವದಂತಿಗಳು ಸಾಕಷ್ಟು ಹರಿದಾಡುತ್ತಿವೆ.
ಆದರೆ, ಈ ಊಹಾಪೋಹಗಳಿಗೆ ಸಂಬಂಧಿಸಿದಂತೆ ಸ್ವತಃ ಗೋಲ್ಡ್ ಸುರೇಶ್ ಅವರೇ ಸ್ಪಷನೆ ನೀಡಿದ್ದು, ಅಪ್ಪ ಅಮ್ಮನಿಗೆ ಏನೂ ಆಗಿಲ್ಲ, ನಮ್ಮ ಕುಟುಂಬದಲ್ಲಿ ಎಲ್ಲರೂ ಸೌಖ್ಯವಾಗಿದ್ದಾರೆ. ಬ್ಯುಸಿನೆಸ್ ಲಾಸ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ತಾವು ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್‌ನಿಂದ ಹೊರಬಂದಿರುವ ಕಾರಣದ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ಗೋಲ್ಡ್ ಸುರೇಶ್, ತಾವು ಬಿಗ್‌ಬಾಸ್‌ಗೆ ಬಂದ ಬಳಿಕ ತಮ್ಮ ಮಡದಿ ಇಂಟಿರೀಯರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಬ್ಯುಸಿನೆಸ್ ಒತ್ತಡದಿಂದ ಸ್ವಲ್ಪ ಕಷ್ಟವಾಗುತ್ತಿತ್ತು. ಹಾಗಾಗಿ ನಾನು ಹೊರಬರಬೇಕಾಯಿತು. ಆದರೂ ನನ್ನ ಪತ್ನಿ ನನ್ನ ಅನುಪಸ್ಥಿಯಲ್ಲಿ ಬ್ಯುಸಿನೆಸ್ ಅನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.