ಒತ್ತಡ ಜಾಸ್ತಿ ಆಯ್ತು.. ಎಡವುತ್ತೇನೋ ಎನ್ನುವ ಭಯ ಇತ್ತು; ಲೈವ್ ಬಂದು ಬಿಗ್ ಬಾಸ್ ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್ ಸುರೇಶ್!
Gold Suresh Out From Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಹೊರಬಂದಿರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಗೋಲ್ಡ್ ಸುರೇಶ್ ಲೈವ್ ಬಂದು ತಿಳಿಸಿದ್ದಾರೆ.
ಆರಂಭದಲ್ಲಿ ಸುರೇಶ್ ತಂದೆ ನಿಧನರಾದರು ಅದಕ್ಕೆ ಹಿರ ಕರೆಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅದು ಸುಳ್ಳು ಸುದ್ದಿ ಆಗಿತ್ತು. ಆ ಬಳಿಕ ಸಾಲಬಾಧೆ ವಿಚಾರ ವೈರಲ್ ಆಯಿತು ಆದರೆ ಅದು ನಿಜವಲ್ಲವಂತೆ.
ಇದೀಗ ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಲೈವ್ ಬಂದ ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರಬಂದ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್‌ನಿಂದ ಆಫರ್ ಬಂದಾಗ ಒಂದೆಡೆ ಖುಷಿ ಆದರೆ, ಮತ್ತೊಂದೆಡೆ ಶಾಕ್ ಆಗಿತ್ತು. ನನಗೆ ಆಫರ್ ಕೊಟ್ಟಿದ್ದೇಕೆ ಗೊತ್ತಾಗಲೇ ಇಲ್ಲ ಎಂದರು.
ಬಿಗ್ ಬಾಸ್ ಜರ್ನಿ ರೋಚಕ ಅನುಭವ. ಬಿಗ್ ಬಾಸ್ ಮನೆ ಒಳಗೆ ಸುಮಾರು ದಿನ ಆಡಿ ಬಂದಿದ್ದೇನೆ ಖುಷಿ ಇದೆ ಎಂದರು.
ನಾನು ಹೊರಗೆ ಬ್ಯುಸಿನೆಸ್ ಮಾಡುತ್ತೇನೆ. ಬಿಗ್ ಬಾಸ್‌ಗೆ ಬಂದಾಗ ಆ ಜವಾಬ್ದಾರಿ ಪತ್ನಿಗೆ ವಹಿಸಿ ಬಂದಿದ್ದೆ. ಬ್ಯುಸಿನೆಸ್ ಹ್ಯಾಂಡಲ್ ಮಾಡೋಕೆ ಒತ್ತಡ ಜಾಸ್ತಿ ಆಯ್ತು ಎಂದಿದ್ದಾರೆ.
ನಿರ್ಧಾರ ತಗೊಳ್ಳುವಾಗ ಎಡವುತ್ತೇನೋ ಎಂಬ ಭಯ ಕಾಡಿತು ಅದಕ್ಕೆ ನಾನು ಹೊರಬರಬೇಕಾಯಿತು ಎಂದಿದ್ದಾರೆ.
ಪತ್ನಿಗೆ ನನ್ನ ಸಹಾಯ ಬೇಕಿತ್ತು. ಈಗ ಯಾವ ರೀತಿಯ ತೊಂದರೆಗಳೂ ಇಲ್ಲ. ಬಿಗ್ ಬಾಸ್ ಎಷ್ಟು ಮುಖ್ಯವೋ, ಉದ್ಯಮ ಕೂಡ ಅಷ್ಟೇ ಮುಖ್ಯ ಎಂದು ಸುರೇಶ್ ಹೇಳಿದ್ದಾರೆ.
ನಾನು ಹೊರಗೆ ಬಂದ ಬಳಿಕ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸುದ್ದಿ ಮಾಡುವವರು ಮಾಡಲಿ ನಾನು ಏನು ಎಂದು ಎಲ್ಲರಿಗೂ ಗೊತ್ತು ಎಂದಿದ್ದಾರೆ.
ಕಾಲಿನ ಗಾಯದಿಂದ ತುಂಬಾ ವೀಕ್ ಆಗಿದ್ದೇನೆ. ಆರೋಗ್ಯದ ಸಮಸ್ಯೆ ಇದೆ. ಎಲ್ಲರಿಗೂ ಥ್ಯಾಂಕ್ಸ್. ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ ಎಂದಿದ್ದಾರೆ.