ಗೋಲ್ಡನ್ ಗರ್ಲ್ ಅಮೂಲ್ಯ B`Day PHOTOS
ಅಮೂಲ್ಯ 1993 ಸೆಪ್ಟೆಂಬರ್ 14 ರಂದು ಬೆಂಗಳೂರಿನಲ್ಲಿ ಜನಿಸಿದರು. 2001ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಪರ್ವ' ಚಿತ್ರದಲ್ಲಿ ಅಮೂಲ್ಯ ಮೊದಲ ಬಾರಿಗೆ ಬಾಲನಟಿಯಾಗಿ ಅಭಿನಯಿಸಿದರು.
ನಂತರ ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿಯೇ ಕಾಣಿಸಿಕೊಂಡಿದ್ದ ಅಮೂಲ್ಯ 2007ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡರು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಮೂಲ್ಯ, ಪತಿ, ಮನೆಯವರು ಹಾಗೂ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಪತಿ ಜಗದೀಶ್ ಅವರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅಮೂಲ್ಯ
ಚಿಕನ್ ಎಂದರೆ ಬಾಯ್ ಚಪ್ಪರಿಸುವ ಮೌಲ್ಯ ಹುಟ್ಟು ಹಬ್ಬಕ್ಕಾಗಿ ಕೇಕ್ ಮಧ್ಯದಲ್ಲಿ ಚಿಕನ್ ಡಿಸೈನ್ ಇರುವಂತೆ ಕೇಕ್ ಮಾಡಿಸಲಾಗಿತ್ತು.
ಪರ್ವ, ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಕಲ್ಲರಳಿ ಹೂವಾಗಿ, ತನನಂ ತನನಂ, ನಮ್ಮ ಬಸವ ಮುಂತಾದ ಚಿತ್ರಗಳಲ್ಲಿ ಅಮೂಲ್ಯ ಬಾಲನಟಿಯಾಗಿ ಅಭಿನಯಿಸಿದ್ದಾರೆ.
ಈ ಎಲ್ಲಾ ಫೋಟೋಗಳನ್ನೂ Facebook ನಿಂದ ತೆಗೆದುಕೊಳ್ಳಲಾಗಿದೆ