ಗುರು ದೆಸೆಯ ಜೊತೆಗೆ ಸೂರ್ಯದೇವನ ಆಶೀರ್ವಾದ ! ಬಂಗಾರದ ಬದುಕು ಈ ರಾಶಿಯವರದ್ದು !
ಏಪ್ರಿಲ್ ನಲ್ಲಿ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಏಪ್ರಿಲ್ 22 ರಂದು ಗುರು ಕೂಡಾ ಮೇಷ ರಾಶಿಯನ್ನು ಪ್ರವೇಶಿಸಿರುತ್ತಾನೆ. ಹೀಗಾಗಿ ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಸಂಯೋಗವಾಗಿದೆ. ಇದರಿಂದಾಗಿ, ಸೂರ್ಯನ ಶಕ್ತಿ ಹೆಚ್ಚಾಗಿದ್ದು, ಎಂದಿಗಿಂತಲೂ ಬಲಶಾಲಿಯಾಗಿದ್ದಾನೆ.
ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಗುರು ಗ್ರಹಗಳ ಸಂಯೋಗದ ಮಂಗಳಕರ ಪರಿಣಾಮವು ಮೇಷ ರಾಶಿಯ ಜನರ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ ಅನೇಕ ದೊಡ್ಡ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಯಶಸ್ಸು ಸಿಗುತ್ತದೆ. ವಿದ್ಯಾರ್ಥಿಗಳಿಗೂ ಇದು ಸಕಾಲ.
ಸಿಂಹ ರಾಶಿಯ ಅಧಿಪತಿ ಸೂರ್ಯ. ಹೀಗಾಗಿ ಈ ರಾಶಿಯವರಿಗೆ ಈ ಸಮಯವು ಶುಭ ಫಲವನ್ನೇ ನೀಡಲಿದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ನಿಮ್ಮ ಯಶಸ್ಸಿಗೆ ಹೆಚ್ಚು ಶ್ರಮ ವಹಿಸಬೇಕಿಲ್ಲ. ಈ ಅವಧಿಯಲ್ಲಿ ಸಿಂಹ ರಾಶಿಯವರಿಗೆ ಬಡ್ತಿ ದೊರೆಯಲಿದೆ. ಹಣಕಾಸಿನ ಲಾಭವಾಗುವುದು.
ಸೂರ್ಯ ದೇವನು ಮೇಷ ರಾಶಿಯಲ್ಲಿ ಸ್ಥಿತನಾದರೆ ಅದರ ವಿಶೇಷ ಲಾಭವನ್ನು ಧನು ರಾಶಿಯವರು ಪಡೆಯುತ್ತಾರೆ. ಈ ಸಮಯದಲ್ಲಿ, ಗುರು ತ್ರಿಕೋನ ರಾಜಯೋಗವನ್ನು ರೂಪಿಸುತ್ತಾನೆ. ಇದರಿಂದ ವೈವಾಹಿಕ ಜೀವನದಲ್ಲಿ ಬರುವ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಮಾನಸಿಕ ನೆಮ್ಮದಿ ನಿಮ್ಮದಾಗುವುದು. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಒದಗುವ ಕಾಲ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)