Good Luck Tips: ಅದೃಷ್ಟದ ಬೆಂಬಲ ಪಡೆಯಲು ಜೀವನದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
ನಮ್ಮಲ್ಲಿ ಕೆಲವರಿಗೆ ಹೆಚ್ಚು ಪರ್ಸ್, ವ್ಯಾಲೆಟ್ ಕೊಳ್ಳುವ ಅಭ್ಯಾಸ ಇರುತ್ತದೆ. ಒಟ್ಟಿಗೆ ಎಲ್ಲವನ್ನೂ ಬಳಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಕೆಲವು ಪರ್ಸ್/ವ್ಯಾಲೆಟ್ ಗಳನ್ನು ಖಾಲಿಯಾಗಿ ಇಡುತ್ತಾರೆ. ಆದರೆ, ನೆನಪಿನಲ್ಲಿ ಮನೆಯಲ್ಲಿ ಎಂದಿಗೂ ಪರ್ಸ್ ಅನ್ನು ಖಾಲಿಯಾಗಿ ಇಡಬಾರದು. ನಿಮ್ಮ ಪರ್ಸ್‌ನಲ್ಲಿ ಒಂದೆರಡು ರೂಪಾಯಿಯಾದರೂ ಸದಾ ಇರುವ ಹಾಗೆ ನೋಡಿಕೊಳ್ಳಿ. ಇಲ್ಲದಿದ್ದರೆ, ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದೆ.
ಮನೆಯಲ್ಲಿ ಕೆಲವು ವಸ್ತುಗಳನ್ನು ಮುರಿಯಬಾರದು. ಅದು ಕನ್ನಡಿ ಮಾತ್ರವಲ್ಲ ತಾಯಿ ಅನ್ನಪೂರ್ಣೆಗೆ ಸಂಬಂಧಿಸಿದ ಅಡುಗೆ ಮನೆಯ ಸಾಮಾಗ್ರಿಗಳು ಕೂಡ ಒಡೆಯದಂತೆ ನಿಗಾವಹಿಸಿ. ಒಂದೊಮ್ಮೆ ಆಕಸ್ಮಿಕವಾಗಿ ಅವು ಒಡೆದರೆ ಅದನ್ನು ಕೂಡಲೇ ಮನೆಯಿಂದ ಹೊರಹಾಕಿ. ಇಲ್ಲದಿದ್ದರೆ, ಅಂತಹ ಮನೆಯಲ್ಲಿ ದುರಾದೃಷ್ಟ ತಾಂಡವವಾಡುತ್ತದೆ.
ನೀವು ಯಾವುದೇ ಹಬ್ಬ ಹರಿದಿನ ಅಥವಾ ಯಾವುದೇ ವಿಶೇಷ ದಿನಗಳಂದು ಚೂಪಾದ ವಸ್ತುಗಳನ್ನು ಎಂದಿಗೂ ಖರೀದಿಸಬಾರದು. ಈ ಒಂದು ತಪ್ಪು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕುಂಠಿತಗೊಳಿಸುತ್ತದೆ.
ಮನುಷ್ಯ ಎಂದ ಮೇಲೆ ಕಷ್ಟ-ಸುಖ ಎರಡೂ ಜೀವನದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೂ, ತುಂಬಾ ಅನಿವಾರ್ಯವಲ್ಲದಿದ್ದರೆ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಅದರಲ್ಲೂ ಮುಖ್ಯವಾಗಿ, ಮಂಗಳವಾರ, ಶುಕ್ರವಾರದ ದಿನ ಯಾರಿಂದಲಾದರೂ ಸಾಲ ಪಡೆಯುವುದನ್ನು ಅಥವಾ ಯಾರಿಗಾದರೂ ಸಾಲ ನೀಡುವ ತಪ್ಪನ್ನು ಎಂದಿಗೂ ಮಾಡಬೇಡಿ.
ಜೀವನದಲ್ಲಿ ನಾವು ಯಾವುದರ ಬಗ್ಗೆ ಹೆಚ್ಚು ಚಿಂತಿಸುತ್ತೇವೆಯೋ ಅದೇ ಮರುಕಳಿಸುತ್ತದೆ. ನಮ್ಮ ನಕಾರಾತ್ಮಕ ಆಲೋಚನೆಗಳಿಂದ ಒಳಿತಾಗಲು ಸಾಧ್ಯವೇ ಇಲ್ಲ. ಅಂತೆಯೇ, ನಕಾರಾತ್ಮಕ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.