30 ವರ್ಷಗಳ ನಂತರ ಶನಿಮಹಾತ್ಮ ರೂಪಿಸುವ ಶಶ ಮಹಾಪುರುಷ ಯೋಗದಿಂದ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ

Wed, 07 Dec 2022-12:53 pm,

ವೃಷಭ ರಾಶಿ : ಶನಿ ರೂಪಿಸುತ್ತಿರುವ ಮಹಾಪುರುಷ ರಾಜಯೋಗ  ವೃಷಭ ರಾಶಿಯವರಿಗೆ ಧನ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗಾವಕಾಶಗಳು ಒಲಿದು ಬರಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕು ಎಂದುಕೊಂಡವರಿಗೆ ಜನವರಿ 17ರ ನಂತರದ ಸಮಯ ಉತ್ತಮವಾಗಿರುತ್ತದೆ. 

ಮಿಥುನ ರಾಶಿ : ಶನಿಯು ಕುಂಭ ರಾಶಿ ಪ್ರವೇಶ ಮಾಡುತ್ತಿದ್ದಂತೆಯೇ ಮಿಥುನ್ ರಾಶಿಯವರ ಎಲ್ಲಾ ರೀತಿಯ ದುಃಖ, ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಪ್ರೇಮ ವಿಷಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಭಾಗ್ಯ ಸಿಗುತ್ತದೆ.

ತುಲಾ ರಾಶಿ : ಶನಿ ಗ್ರಹದ ರಾಶಿ ಪರಿವರ್ತನೆಯಿಂದ ತುಲಾ ರಾಶಿಯವರಿಗೂ ಅದೃಷ್ಟ ಕೈ ಹಿಡಿಯಲಿದೆ. ಸಂಸಾರದಲ್ಲಿ ಸುಖ ಶಾಂತಿ ನೆಲೆಸಲಿದೆ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಮಕ್ಕಳ ಮೂಲಕ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ಲಾಭವಾಗಲಿದೆ. 

ಧನು ರಾಶಿ : ಇಲ್ಲಿಯವರೆಗೆ ಧನು ರಾಶಿಯವರನ್ನು ಕಾಡಿರುವ ಶನಿ ಮಹಾತ್ಮ, ಇನ್ನು ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ.  ವೃತ್ತಿ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. 

(Disclaimer: ಈ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link