ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ವೇತನದಲ್ಲಿ ಶೇ.186ರಷ್ಟು ಹೆಚ್ಚಳ
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹಳಷ್ಟು ಒಳ್ಳೆಯ ಸುದ್ದಿ ಕಾದಿದೆ. ಅದರಲ್ಲಿ ಪ್ರಮುಖವಾದದ್ದು 8ನೇ ವೇತನ ಆಯೋಗದ ರಚನೆಯ ಘೋಷಣೆ.
ಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ಕನಿಷ್ಠ ಮೂಲ ವೇತನ 18,000 ರೂಪಾಯಿ.ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಬಂಪರ್ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ನೌಕರರ ಕನಿಷ್ಠ ಮೂಲ ವೇತನ 18,000 ರೂ.ಯಿಂದ 51,480 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
8ನೇ ವೇತನ ಆಯೋಗವನ್ನು ತರಲು ಸರಕಾರ ಚಿಂತನೆ ನಡೆಸಿದೆ. ಹೀಗಾದಲ್ಲಿ ಸಂಬಳವನ್ನು ಲೆಕ್ಕಾಚಾರ ಮಾಡಲು ಬಳಸುವ ಫಿಟ್‌ಮೆಂಟ್ ಅಂಶವು ಹೆಚ್ಚಾಗುತ್ತದೆ. ಆಗ ಸಂಬಳವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.
ಸರಕಾರ 8ನೇ ವೇತನ ಆಯೋಗವನ್ನು ಘೋಷಿಸಿ ಅದು ಜಾರಿಯಾದರೆ ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ ಮತ್ತು ಪಿಂಚಣಿ ಶೇ.186ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದು ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಪರಿಹಾರವಾಗಲಿದೆ.
7ನೇ ಪೇ ಬ್ಯಾಂಡ್‌ನಿಂದ 8ನೇ ಪೇ ಬ್ಯಾಂಡ್‌ಗೆ ಪರಿವರ್ತನೆಯಾದ ಮೇಲೆ ಕನಿಷ್ಠ ಮೂಲ ವೇತನ ರೂ.18,000ವನ್ನು ರೂ.51,480ಕ್ಕೆ ಹೆಚ್ಚಿಸಬಹುದು. ಫಿಟ್ಮೆಂಟ್ ಅಂಶವನ್ನು 2.86 ಗೆ ಬದಲಾಯಿಸಿದಾಗ ಇದು ಸಾಧ್ಯವಾಗುತ್ತದೆ. ಹೀಗಾಗಿ ಸುಮಾರು 1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹೊಸ ವರ್ಷದ ಆರಂಭದಲ್ಲಿ ಶುಭ ಸುದ್ದಿ ಸಿಗಲಿದೆ.
ನೌಕರರಿಗೆ ಮಾತ್ರವಲ್ಲದೆ ಪಿಂಚಣಿದಾರರಿಗೂ ಇದರಿಂದ ಉತ್ತಮ ಲಾಭ ದೊರೆಯಲಿದೆ. ಯಾಕೆಂದರೆ ಪಿಂಚಣಿ ಶೇ.186ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ ಇರುವ 9,000 ಇರುವ ಪಿಂಚಣಿ 25,740 ರೂಪಾಯಿಗೆ ಹೆಚ್ಚಿಸಬಹುದು. ಆದರೆ, ಇದುವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
8 ನೇ ವೇತನ ಆಯೋಗಕ್ಕಾಗಿ, ಜಂಟಿ ಸಲಹಾ ಸಂಸ್ಥೆಗಳ ರಾಷ್ಟ್ರೀಯ ಮಂಡಳಿ (NC-JCM) ಜುಲೈ ಮತ್ತು ಆಗಸ್ಟ್ 2024 ರಲ್ಲಿ ತನ್ನ ಬೇಡಿಕೆಯನ್ನು ನೀಡಿದೆ. ಡಿಸೆಂಬರ್‌ನಲ್ಲಿ ಈ ಕುರಿತು ಸಭೆ ನಡೆಯುವ ನಿರೀಕ್ಷೆಯಿದೆ. ಈ ಸಭೆಯ ನಂತರ ಸ್ಪಷ್ಟನೆ ದೊರೆಯುವ ನಿರೀಕ್ಷೆಯಿದೆ.
ಈಗ ಮುಂದಿನ ವೇತನ ಆಯೋಗ, 8ನೇ ವೇತನ ಆಯೋಗ ರಚನೆಯಾದರೆ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಆದಾಯದಲ್ಲಿನ ಈ ಹೆಚ್ಚಳವು ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತದೆ.