PM Kisan Scheme: ಹೊಸ ವರ್ಷಕ್ಕೂ ಮುನ್ನವೇ ರೈತರಿಗೆ ಗುಡ್ ನ್ಯೂಸ್: 13ನೇ ಕಂತಿನ ಬಗ್ಗೆ ಮಹತ್ವದ ಮಾಹಿತಿ

Sun, 04 Dec 2022-2:58 pm,

ಪಿಎಂ ಕಿಸಾನ್ ಯೋಜನೆಯ 13ನೇ ಕಂತನ್ನು ಡಿಸೆಂಬರ್ 2022 ರಿಂದ ಮಾರ್ಚ್ 2023 ರವರೆಗೆ ವರ್ಗಾಯಿಸಲಾಗುತ್ತದೆ. ಅಕ್ಟೋಬರ್ 17ರಂದು ಸರಕಾರ 12ನೇ ಕಂತಿನ ಹಣವನ್ನು ಕೋಟ್ಯಂತರ ರೈತರ ಖಾತೆಗೆ ವರ್ಗಾಯಿಸಿದೆ.

ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಹಲವು ರೀತಿಯ ವಂಚನೆಗಳು ಕಂಡುಬರುತ್ತಿದ್ದು, ಈ ಕಾರಣದಿಂದ ಈ ಯೋಜನೆಗೆ ಇನ್ನು ಮುಂದೆ ಪಡಿತರ ಚೀಟಿ ಸಂಖ್ಯೆಯನ್ನು ಸಲ್ಲಿಸುವುದನ್ನು ಸರ್ಕಾರ ಅನಿವಾರ್ಯಗೊಳಿಸಿದೆ. ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಸಲ್ಲಿಸದಿದ್ದರೆ 2000 ರೂ. ಸಿಗುವುದಿಲ್ಲ.

ಇದರೊಂದಿಗೆ, ಸರ್ಕಾರವು ಇ-ಕೆವೈಸಿ, ಭೂ ದಾಖಲೆ ಪರಿಶೀಲನೆ ಮತ್ತು ಈಗ ಪಡಿತರ ಚೀಟಿ ಸಂಖ್ಯೆಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಆದರೂ ರೈತರು ತನ್ನ ಪಡಿತರ ಚೀಟಿಯನ್ನು ಸಲ್ಲಿಸಬೇಕಾಗಿಲ್ಲ. ಆದರೆ ಹೊಸ ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ.

ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದರೆ, ಅವರು ಈಗ ಸರ್ಕಾರಿ ನೌಕರನಾಗಿದ್ದರೆ ಅಥವಾ ನಿವೃತ್ತರಾಗಿದ್ದರೆ, ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ಅಂತಹವರು ರೈತ ಯೋಜನೆಯ ಲಾಭ ಪಡೆಯಲು ಅನರ್ಹರು. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬ ಸದಸ್ಯರು ಸಹ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.

ಕೇಂದ್ರ ಸರ್ಕಾರದಿಂದ ಈ ಯೋಜನೆಯಲ್ಲಿ ರೈತರಿಗೆ ವಾರ್ಷಿಕ 6000 ರೂ. ಇದುವರೆಗೆ 12 ಕಂತಿನ ಹಣ ಸರ್ಕಾರದಿಂದ ರೈತರ ಖಾತೆಗೆ ಜಮಾ ಆಗಿದ್ದು, ಶೀಘ್ರದಲ್ಲೇ 13ನೇ ಕಂತಿನ ಹಣವೂ ಖಾತೆಗೆ ಬರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link