ಸರ್ಕಾರಿ ನೌಕರರಿಗೆ ಆಘಾತ !8 ನೇ ವೇತನ ಆಯೋಗ ಜಾರಿ ಇಲ್ಲ ! ಇನ್ನು ಮುಂದೆ ಈ ನಿಯಮದಡಿ ವೇತನ ಹೆಚ್ಚಳ
ಇದುವರೆಗೆ 8ನೇ ವೇತನ ಆಯೋಗ ರಚನೆ ಬಗ್ಗೆ ಸರಕಾರದಿಂದ ಯಾವುದೇ ಮಾಹಿತಿ ಇಲ್ಲ. ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ಆಯೋಗವನ್ನು ರಚಿಸಲಾಗುತ್ತದೆ.
ಇದೇ ಟ್ರೆಂಡ್ ಮುಂದುವರಿದರೆ ಈ ಬಗ್ಗೆ ಘೋಷಣೆಯಾಗಬೇಕಿತ್ತು.ಆದರೆ, ಈ ಬಾರಿ ಸರ್ಕಾರ ಬೇರೆಯದೇ ವಿಧಾನವನ್ನು ಅನುಸರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ.
ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸರ್ಕಾರವು ಹೊಸ ವೇತನ ಆಯೋಗವನ್ನು ರಚಿಸುವ ಬದಲು ವೇತನ ಹೆಚ್ಚಳಕ್ಕೆ ಹೊಸ ವಿಧಾನ ಕಂಡುಕೊಳ್ಳಲಿದೆ ಎನ್ನುತ್ತಾರೆ. ಅದುವೇ ಕಾರ್ಯಕ್ಷಮತೆಯ ಆಧಾರದ ಮೇಲೆ ನೌಕರರ ವೇತನವನ್ನು ಹೆಚ್ಚಳ.
ಅಂದರೆ ಎಲ್ಲರಿಗೂ ಒಂದೆ ರೀತಿಯಲ್ಲಿ ವೇತನ ಹೆಚ್ಚಳ ಮಾಡುವ ಬದಲು ಅವರವರ ಕಾರ್ಯಕ್ಷಮತೆಗೆ ತಕ್ಕಂತೆ ವೇತನ ಹೆಚ್ಚಳವಾಗುವುದು
ಎಂಟನೇ ವೇತನ ಆಯೋಗದ ಬಗ್ಗೆ ಪ್ರಸ್ತುತ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಇದಾದ ಬಳಿಕ ಸರ್ಕಾರವೇ ವೇತನ ಹೆಚ್ಚಳಕ್ಕೆ ಹೊಸ ವ್ಯವಸ್ಥೆ ಜಾರಿಗೆ ತರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸರ್ಕಾರವು ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯನ್ನು ತರಬಹುದು ಅಥವಾ ಹಣದುಬ್ಬರ ದರವನ್ನು ಆಧರಿಸಿ ವೇತನ ಹೆಚ್ಚಳ ನಿರ್ಧಾರ ತೆಗೆದುಕೊಳ್ಳಬಹುದು.
ಈ ವ್ಯವಸ್ಥೆ ಜಾರಿಗೆ ಬಂದರೆ ನಿಯಮಿತ ವೇತನ ಹೊಂದಾಣಿಕೆಗೆ 10 ವರ್ಷ ಕಾಯಬೇಕಾಗಿಲ್ಲ. ಆದರೆ, ಸದ್ಯಕ್ಕೆ ಈ ಬಗ್ಗೆ ಅಧಿಕೃತ ಅಥವಾ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.
ಆದರೆ ಸರ್ಕಾರದ ನಿರ್ಧಾರ ಯಾವುದೇ ಆಗಿರಲಿ, ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.