ಚಳಿಗಾಲದಲ್ಲಿ ಮಾತ್ರ ಸಿಗುವ ಈ ಕಾಳನ್ನು ಒಂದು ಹಿಡಿ ತಿಂದರೆ ಸಾಕು ಬ್ಲಡ್ ಶುಗರ್ ನಾರ್ಮಲ್ ಆಗುವುದು ! ಒಮ್ಮೆ ಸೇವಿಸಿ ನೋಡಿ
ಚಳಿಗಾಲದಲ್ಲಿ ಕೆಲವು ರೋಗಗಳು ನಿಯಂತ್ರಣ ತಪ್ಪಿ ಹೋಗುವುದು. ಈ ಪೈಕಿ ಬ್ಲಡ್ ಶುಗರ್ ಕೂಡಾ ಒಂದು. ಚಳಿಗಾಲದಲ್ಲಿ ಮಧುಮೇಹ ಕೂಡಾ ನಿಯಂತ್ರಣ ತಪ್ಪುವುದು.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕಾಳು ಎಂದರೆ ಹಸಿರು ಬಟಾಣಿ. ಮಧುಮೇಹ ರೋಗಿಗಳಿಗೆ ಹಸಿರು ಬಟಾಣಿ ಅಮೃತ ಇದ್ದ ಹಾಗೆ. ಬ್ಲಡ್ ಶುಗರ್ ಇದ್ದವರಿಗೆ ಹಸಿರು ಬಟಾಣಿ ಸೂಪರ್ ಫುಡ್ ಎಂದರೆ ತಪ್ಪಲ್ಲ.
ಇದು ನಾಲಗೆಗೆ ರುಚಿ ಮಾತ್ರವಲ್ಲ, ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುವ ಪೋಷಕಾಂಶಗಳನ್ನು ಬಟಾಣಿ ಒಳಗೊಂಡಿದೆ.
ಬಟಾಣಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಫೈಬರ್ ಮತ್ತು ಪ್ರೊಟೀನ್ ರಕ್ತದಲ್ಲಿನ ಸಕ್ಕರೆಯ ಏರಿಳಿತವನ್ನು ತಡೆಯಲು ಸಹಕಾರಿಯಾಗಿದೆ.
ಹಸಿರು ಬಟಾಣಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಹೊಟ್ಟೆಯನ್ನು ತ್ವರಿತವಾಗಿ ತುಂಬಲು ಸಹಾಯ ಮಾಡುತ್ತದೆ. ಅದರ ಕಾರಣದಿಂದಾಗಿ ತೂಕವನ್ನು ನಿಯಂತ್ರಿಸಲಾಗುತ್ತದೆ.
ಹಸಿರು ಬಟಾಣಿಗಳನ್ನು ಕುದಿಸಿ, ಸೂಪ್ ಗೆ ಸೇರಿಸಿ. ಸಲಾಡ್ ರೂಪದಲ್ಲಿ ಅಥವಾ ತರಕಾರಿಗಳೊಂದಿಗೆ ಮಿಶ್ರಣ ಮಾಡುವ ಮೂಲಕ ತಿನ್ನಬಹುದು. ಇದಲ್ಲದೇ ಇದನ್ನು ಚಪಾತಿಯೊಂದಿಗೆ ಕೂಡಾ ತಿನ್ನಬಹುದು.
ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಇದನ್ನು ZEE KANNADA NEWS ಅನುಮೋದಿಸುವುದಿಲ್ಲ.