ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇನ್ನಿಲ್ಲ: ಪತ್ನಿ, ಮಕ್ಕಳೊಂದಿಗಿನ ಫೋಟೋಗಳು ವೈರಲ್
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ಕನ್ಹೋಲಿ ಗ್ರಾಮದಲ್ಲಿ ಜನಿಸಿದ್ದರು. ವರುಣ್ ಸಿಂಗ್ ಅವರನ್ನು ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನಿಯೋಜಿಸಲಾಗಿತ್ತು. ವರುಣ್ ಸಿಂಗ್ ಅವರು ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ (ಡಿಎಸ್‌ಎಸ್‌ಸಿ) ನಿರ್ದೇಶನ ಸಿಬ್ಬಂದಿಯಾಗಿದ್ದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ರಿಡ್ ರಿಮಾನ್ ಎಂಬ ಪುತ್ರ ಮತ್ತು ಆರಾಧ್ಯ ಎಂಬ ಪುತ್ರಿ ಇದ್ದಾರೆ. ಅವರ ಪತ್ನಿಯ ಹೆಸರು ಗೀತಾಂಜಲಿ ಸಿಂಗ್. ವರುಣ್ ತನ್ನ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಕುಟುಂಬದ ಅನೇಕ ಜನರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ವರುಣ್ ಸಿಂಗ್ ಅವರ ತಂದೆ ಕರ್ನಲ್ ಕೆಪಿ ಸಿಂಗ್ ಕೂಡ ಸೇನೆಯಿಂದ ನಿವೃತ್ತರಾಗಿದ್ದಾರೆ. ಅವರ ಕಿರಿಯ ಸಹೋದರ ತನುಜ್ ಕೂಡ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನದಂದು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶೌರ್ಯ ಚಕ್ರವನ್ನು ಪ್ರದಾನ ಮಾಡಿದ್ದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಚಿಕ್ಕಪ್ಪ ಅಖಿಲೇಶ್ ಪ್ರತಾಪ್ ಸಿಂಗ್ ಮಾಜಿ ಶಾಸಕ ಮತ್ತು ಕಾಂಗ್ರೆಸ್ ವಕ್ತಾರ. ಪ್ರಸ್ತುತ ಅವರ ಕುಟುಂಬವು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಾಸಿಸುತ್ತಿದೆ. ವರುಣ್ ಸಿಂಗ್ ಅವರ ತಾಯಿಯ ಹೆಸರು ಉಮಾ. ವರುಣ್ ಚಂಡೀಗಢದ ಚಂಡಿ ಮಂದಿರ ಶಾಲೆಯಲ್ಲಿ 12ನೇ ತರಗತಿಯವರೆಗೆ ಓದಿದ್ದಾರೆ.
ವರುಣ್ ಸಿಂಗ್ ಅವರು ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಅವರ ಬ್ಯಾಚ್ ಮೇಟ್. 27 ಫೆಬ್ರವರಿ 2019ರಂದು ಭಾರತದ ಗಡಿಯನ್ನು ಪ್ರವೇಶಿಸಿದ ಪಾಕಿಸ್ತಾನಿ ವಿಮಾನಗಳನ್ನು ಅಭಿನಂದನ್ ವರ್ಧಮಾನ್ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರು.