GST Collection record: ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಸಂಗ್ರಹ, ಕರ್ನಾಟಕದಲ್ಲಿ ಎಷ್ಟು ಗೊತ್ತಾ?

Wed, 01 May 2024-6:56 pm,

ದೇಶದಲ್ಲಿ GST ಜಾರಿಯಾದ ನಂತರ ಪ್ರತಿ ಏಪ್ರಿಲ್‌ ತಿಂಗಳಿನಲ್ಲಿಯೇ ಅತಿಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. 2022ರ ಏಪ್ರಿಲ್‌ಲ್ಲಿ 1.68 ಲಕ್ಷ ಕೋಟಿ ರೂ. GST ಸಂಗ್ರಹವಾದರೆ, ಕಳೆದ ವರ್ಷದ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.

ಇನ್ನು ಇದೇ ಮೊದಲ ಬಾರಿಗೆ ದೇಶದಲ್ಲಿ GST ಸಂಗ್ರಹ 2 ಲಕ್ಷ ಕೋಟಿ ರೂ. ಗಡಿ ದಾಟಿದೆ. ವರ್ಷದಿಂದ ವರ್ಷಕ್ಕೆ GST ಸಂಗ್ರಹದಲ್ಲಿ ಏರಿಕೆಯಾಗುತ್ತಿದ್ದು, ದೇಶದ ಆರ್ಥಿಕತೆಗೆ ಉತ್ತಮ ಬಲ ಬಂದಂತಾಗಿದೆ. 

ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ GST ಸಂಗ್ರಹ ಶೇ.12.4ರಷ್ಟು ಏರಿಕೆಯಾಗಿದೆ. ಭಾರತದ GST ಸಂಗ್ರಹವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದು, ಏಪ್ರಿಲ್‌ನಲ್ಲಿ ಭಾರೀ ಜಿಗಿತ ಕಂಡಿದೆ.

ಕೇಂದ್ರ ಸರ್ಕಾರವು ಪರೋಕ್ಷ ತೆರಿಗೆ ಮೂಲಕ 2.10 ಲಕ್ಷ ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ಸಂಗ್ರಹಿಸಿದೆ. GST ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಈ ಬಾರಿ 15,978 ಕೋಟಿ ರೂ. GST ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಸಂಗ್ರಹವಾಗಿತ್ತು.

ದೇಶದಲ್ಲಿ ಅತಿಹೆಚ್ಚು GST ಸಂಗ್ರಹಿಸಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 37,671 ಕೋಟಿ ರೂ., ಗುಜರಾತ್‌ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ. ಮತ್ತು ಹರ್ಯಾಣದಿಂದ 12,168 ಕೋಟಿ ರೂ. GST ಸಂಗ್ರಹವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link