Guava Leaves: ಈ ಐದು ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ನಾಶ ಮಾಡುತ್ತದೆ ಪೇರಳೆ ಎಲೆ !
ಹಲ್ಲುನೋವಿನಿಂದ ಬಳಲುತ್ತಿದ್ದರೆ ಪೇರಳೆ ಎಲೆಗಳನ್ನು ಅಗಿಯಬೇಕು. ಅಥವಾ ಪೇರಳೆ ಎಲೆಗಳನ್ನು ಕುದಿಸಿದ ನೀರಿನಿಂದ ಗಾರ್ಗಲ್ ಮಾಡಬೇಕು. ಹೀಗೆ ಮಾಡಿದರೆ ಹಲ್ಲು ನೋವಿನಿಂದ ಪರಿಹಾರ ಸಿಗುತ್ತದೆ.
ಬಾಯಿ ಹುಣ್ಣು ನಿವಾರಣೆಗೆ ಕೂಡಾ ಪೇರಳೆ ಎಲೆಗಳು ಸಹಾಯ ಮಾಡುತ್ತವೆ. ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಮತ್ತು ಆ ನೀರಿನಿಂದ ಬಾಯಿ ಮುಕ್ಕಳಿಸುತ್ತಾ ಇದ್ದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ವಾಕರಿಕೆ ಮತ್ತು ವಾಂತಿಯ ಸಂದರ್ಭದಲ್ಲಿ, ಪೇರಳೆ ಎಲೆಗಳ ಕಷಾಯವು ತ್ವರಿತ ಪರಿಹಾರವನ್ನು ನೀಡುತ್ತದೆ. ಈ ಕಷಾಯವನ್ನು ದಿನಕ್ಕೆ 2-3 ಬಾರಿ ಕುಡಿಯುವುದರಿಂದ ವಾಂತಿ ಸಮಸ್ಯೆ ಕಡಿಮೆಯಾಗುತ್ತದೆ.
ಪೇರಳೆ ಎಲೆಗಳು ಅಸ್ತಮಾ ರೋಗಿಗಳಿಗೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಸ್ತಮಾದಿಂದ ಬಳಲುತ್ತಿದ್ದರೆ ಪೇರಳೆ ಎಲೆ ಇದರಿಂದ ಪರಿಹಾರ ಸಿಗುತ್ತದೆ.
ಪೇರಳೆ ಎಲೆಗಳನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)