Guru Gochar 2024: ಹೊಸ ವರ್ಷದಲ್ಲಿ ಗುರು ಸಂಚಾರ ಪ್ರಭಾವ, ಮೂರು ರಾಶಿಯವರಿಗೆ ಸವಾಲಿನ ಸಮಯ

Wed, 10 Jan 2024-6:42 am,

ಗುರು ಗೋಚರ: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಗ್ರಹಗಳಲ್ಲಿ ಒಂದು ಎಂದು ಬಣ್ಣಿಸಲ್ಪಡುವ ದೇವಗುರು ಬೃಹಸ್ಪತಿ ಈ ವರ್ಷ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. 2024 ರಲ್ಲಿ, ಗುರು 12 ವರ್ಷಗಳ ನಂತರ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

ಗುರು ಸಂಚಾರ ಬದಲಾವಣೆ:  01 ಮೇ 2024ರ ಮಧ್ಯಾಹ್ನ 2:29ರ ಸುಮಾರಿಗೆ ಗುರು ಸಂಕ್ರಮಣವಾಗಿ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಗುರು ರಾಶಿ ಪರಿವರ್ತನೆ ಎಫೆಕ್ಟ್: ಗುರು ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ವೃಷಭ ರಾಶಿಗೆ ಗುರು ಪ್ರವೇಶದಿಂದಾಗಿ ಕೆಲವು  ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ. 

ಮೂರು ರಾಶಿಯವರಿಗೆ ಸಂಕಷ್ಟ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ರಾಶಿ ಬದಲಾವಣೆಯು ಮೂರು ರಾಶಿಯವರ ಜೀವನದಲ್ಲಿ ಸವಾಲಿನ ದಿನಗಳನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ಅವರು ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ. ಆ ರಾಶಿಗಳು ಯಾವುವೆಂದರೆ....

ವೃಷಭ ರಾಶಿ:  2024ರಲ್ಲಿ ಬೃಹಸ್ಪತಿ ರಾಶಿ ಪರಿವರ್ತನೆ ಹೊಂದಿ ವೃಷಭ ರಾಶಿಯನ್ನೇ ಪ್ರವೇಶಿಸಲಿದ್ದಾನೆ. ಸ್ವ ರಾಶಿಯಲ್ಲಿ ಗುರು ಸಂಚಾರವು ವೃಷಭ ರಾಶಿಯವರಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸಹ ಎದುರಿಸಬೇಕಾಗಬಹುದು. ಉದ್ಯೋಗ ರಂಗದಲ್ಲಿಯೂ ಏರಿಳಿತಗಳು ನಿಮ್ಮನ್ನು ಬಾಧಿಸುವ ಸಾಧ್ಯತೆ ಇದೆ. 

ಕನ್ಯಾ ರಾಶಿ:  ಈ ವರ್ಷ ಗುರು ರಾಶಿ ಪರಿವರ್ತನೆ ಕನ್ಯಾ ರಾಶಿಯವರಿಗೆ ಹಲವು ವಿಷಯಗಳಲ್ಲಿ ಪ್ರತಿಕೂಲ ಪರಿಣಾಮವನ್ನು ಬೀರಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನದ ಅಗತ್ಯವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಭೂ ವಿವಾದಗಳು ಉಲ್ಬಣಗೊಳ್ಳಬಹುದು. 

ತುಲಾ ರಾಶಿ:  2024ರಲ್ಲಿ ಗುರು ಸಂಚಾರ ಬದಲಾವಣೆಯ ಪರಿಣಾಮವಾಗಿ, ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಆರ್ಥಿಕ ಸ್ಥಿತಿ ದುರ್ಬಲವಾಗಿದ್ದು ಸಾಲದ ಹೊರೆ ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link