Guru Nakshatra Parivartan: ಭರಣಿ ನಕ್ಷತ್ರಕ್ಕೆ ಸುಖ-ಸೌಭಾಗ್ಯದಾತ ಗುರುವಿನ ಪ್ರವೇಶ, ಈ ಜನರ ಜೀವನದಲ್ಲಿ ಭಾರಿ ಧನಾಗಮನ!
Guru Nakshatra Parivartan 2024: ವೈದಿಕ ಜೋತಿಷ್ಯದಲ್ಲಿ ಗುರು ಬೃಹಸ್ಪತಿಗೆ ದೇವ-ದೇವತೆಗಳ ಗುರುವಿನ ಸ್ಥಾನ ಪ್ರಾಪ್ತಿ ಇದೆ. ಗುರು ತನ್ನ ರಾಶಿ ಪರಿವರ್ತಿಸಿದಂತೆ, ಒಂದು ನಿಶ್ಚಿತ ಕಾಲಾಂತರದಲ್ಲಿ ನಕ್ಷತ್ರವನ್ನು ಕೂಡ ಪರಿವರಿಸುತ್ತಾನೆ. ಪ್ರಸ್ತುತ ಗುರು ಭರಣಿ ನಕ್ಷತ್ರದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
ಮೇಷ ರಾಶಿ: ಗುರುವಿನ ಭರಣಿ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ವಿದೇಶಕ್ಕೆ ಯಾತ್ರೆ ಕೈಗೊಳ್ಳುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ಇದಲ್ಲದೆ ವಿದೇಶದಲ್ಲಿ ಕೆಲಸ ಅಥವಾ ವ್ಯಾಪಾರ ಮಾಡುವ ಜನರಿಗೆ ಇದು ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಆರ್ಥಿಕ ಸ್ಥಿತಿ ಕೂಡ ಸಾಕಷ್ಟು ಉತ್ತಮವಾಗಿರಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ, ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಎಚ್ಚರಿಕೆವಹಿಸುವ ಆವಶ್ಯಕತೆ ಇದೆ. ಏಕೆಂದರೆ, ಆರೋಗ್ಯದ ಕಾರಣ ಅಧಿಕ ಹಣ ವೆಚ್ಚವಾಗುವ ಸಾಧ್ಯತೆ ಇದೆ.
ವೃಷಭ ರಾಶಿ: ಗುರಿವಿನ ಈ ನಕ್ಷತ್ರ ಪರಿವರ್ತನೆಯಿಂದ ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ದ್ವಾದಶ ಭಾವದಲ್ಲಿರುವ ಗುರುವಿನ ದೃಷ್ಟಿ ನಿಮ್ಮ ಜಾತಕದ ಚತುರ್ಥ ಭಾವದ ಮೇಲೆ ನೆಟ್ಟಿದೆ. ಹೀಗಾಗಿ ಸಂಪತ್ತು ಖರೀದಿಸುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ಇದರ ಜೋತೆಗೆ ವ್ಯಾಪಾರ ಮಾಡುವ ಜನರಿಗೆ ಸಾಕಷ್ಟು ಲಾಭ ಸಿಗಲಿದೆ. ಗುರುವಿನ ಕೃಪೆಯಿಂದ ಆದ್ಯಾತ್ಮದತ್ತ ನಿಮ್ಮ ಒಲವು ಸಾಕಷ್ಟು ಹೆಚ್ಚಾಗಲಿದೆ. ಇದಲ್ಲದೆ ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗವಹಿಸುವಿರಿ. ಭಾಗ್ಯದ ಸಂಪೂರ್ಣ ಬೆಂಬಲ ಸಿಗುವ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗುವ ಪ್ರಬಲ ಸಂಕೇತಗಳಿವೆ. ದೀರ್ಘ ಕಾಲದಿಂದ ನಿಂತುಹೋದ ಕೆಲಸಗಳಿಗೆ ಮತ್ತೆ ಗತಿ ಸಿಗಲಿದೆ. ವಿದೇಶದಲ್ಲಿ ಇಂಪೋರ್ಟ್ ಎಕ್ಸ್ಪೋರ್ಟ್ ಕೆಲಸದಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ನೌಕರ ವರ್ಗದ ಜನರಿಗೂ ಕೂಡ ಇದರಿಂದ ಸಾಕಷ್ಟು ಲಾಭ ಸಿಗಲಿದೆ. ಕಾರ್ಯಸ್ಥಳದಲ್ಲಿ ವರಿಷ್ಠರ ಬೆಂಬಲ ಸಿಗಲಿದೆ. ಇದರಿಂದ ನೀವು ನಿಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಎಚ್ಚರಿಕೆಯ ಅವಶ್ಯಕತೆ ಇದೆ.
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಅಷ್ಟಮ ಭಾವದಲ್ಲಿ ಗುರುವಿನ ಈ ನಕ್ಷತ್ರ ಗೋಚರ ನೆರವೇರುತ್ತಿದ್ದು, ಆತ ನಿಮ್ಮ ಧನ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಶುಕ್ರನ ನಕ್ಷ್ತತ್ರಕ್ಕೆ ಗುರುವಿನ ಪ್ರವೇಶದಿಂದ ಧನ ಹಾಗೂ ಭಾಗ್ಯದ ಸಂಪೂರ್ಣ ಬೆಂಬಲದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಇದರ ಜೊತೆಗೆ ದೀರ್ಘಾವಧಿಯಿಂದ ನಿಂತು ಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಭಾಗ್ಯದ ಸಂಪೂರ್ಣ ಬೆಂಬಲ ಸಿಗುವ ಕಾರಣ ಹೂಡಿಕೆಯಿಂದ ನಿಮಗೆ ಅಪಾರ ಧನಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಯಶಸ್ಸಿನ ಜೊತೆಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿರುವ ಜನರಿಗೆ ಅಪಾರ ಯಶಸ್ಸು ಸಿಗಲಿದೆ. ಶಿಕ್ಷಣದ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಿಗುವ ನಿರೀಕ್ಷೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)