Guru Vakri Effect: ಗುರು ವಕ್ರೀ- ಈ ರಾಶಿಯವರಿಗೆ ಕುಬೇರ ಯೋಗ

Wed, 29 Jun 2022-2:26 pm,

ವೃಷಭ ರಾಶಿಯವರಿಗೆ ಗುರು ವಕ್ರ ಪಲ್ಲಟದಿಂದ ಲಾಭವಾಗಲಿದೆ. ಈ ರಾಶಿಗೆ ಸೇರಿದವರು ವ್ಯಾಪಾರದಲ್ಲಿ ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಮಿಥುನ ರಾಶಿಯವರಿಗೆ ಈ ಸಮಯ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ಇದರಿಂದ ತುಂಬಾ ಶುಭವಾಗಲಿದೆ.

ವಕ್ರೀ ಗುರು ಕರ್ಕಾಟಕ ರಾಶಿಯವರಿಗೆ ತುಂಬಾ ಅನುಕೂಲಕವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು, ಕೀರ್ತಿ ಹೆಚ್ಚುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಸಿಗಲಿದೆ. ಇಷ್ಟು ದಿನ ನೆಲೆಗುದಿಗೆ ಬಿದ್ದಿದ್ದ ಕೆಲಸಗಳು ಕೈಗೂಡಲಿವೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹೊಸ ಹೂಡಿಕೆಯಲ್ಲಿ ಯಶಸ್ಸು ಸಿಗುತ್ತದೆ.

ಕುಂಭ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆಯು ಉತ್ತಮ ಲಾಭ ನೀಡಲಿದೆ. ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಕೌಟುಂಬಿಕ ಜೀವನ ಮಧುರವಾಗಿರುತ್ತದೆ.    ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link