ಡಿಸೆಂಬರ್‌ನಲ್ಲಿ ಗುರು ಬಲದಿಂದ ಈ ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ

Tue, 28 Nov 2023-6:37 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವಣೆಯೂ ಕೂಡ ವಿಶ್ವದ ಪ್ರತಿ ಜೀವ ರಾಶಿಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. 

ಗುರು ಬಲ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಅಧಿಪತಿಯಾದ ಗುರು ಉನ್ನತ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಗೆ ಗುರು ಬಲ ಇರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. 

ಗುರು ಬಲ ಪ್ರಭಾವ: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಜ್ಞಾನ, ಬುದ್ದಿವಂತಿಕೆಯನ್ನು ಪ್ರತಿನಿಧಿಸುತ್ತಾನೆ. ವ್ಯಕ್ತಿಯ ಜಾತಕದಲ್ಲಿ ಗುರು ಬಲ ಇದ್ದಾಗ ಆ ವ್ಯಕ್ತಿ ಮಾಡುವ ಪ್ರತಿ ಕೆಲಸದಲ್ಲೂ ಗುರು ಒಳ್ಳೆಯ ಫಲಗಳನ್ನು ನೀಡುತ್ತಾನೆ. ಮಾತ್ರವಲ್ಲ, ಮದುವೆಯಂತಹ ಶುಭ ಕಾರ್ಯಗಳು ಜರುಗಬೇಕೆಂದರೆ ವ್ಯಕ್ತಿಯ ಜಾತಕದಲ್ಲಿ ಗುರು ಬಲ ಇರಲೇ ಬೇಕು ಎಂತಲೂ ಹೇಳಲಾಗುತ್ತದೆ. 

ಇದೀಗ ಈ ವರ್ಷಾಂತ್ಯದಲ್ಲಿ ಎಂದರೆ ಡಿಸೆಂಬರ್ 2023ರ ಕೊನೆಯ ದಿನ 31ನೇ ತಾರೀಕಿನಂದು ದೇವಗುರು ಬೃಹಸ್ಪತಿಯು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಪ್ರಸ್ತುತ ಹಿಮ್ಮುಖ ಸ್ಥಿತಿಯಲ್ಲಿರುವ ಗುರು ಈ ವರ್ಷಾಂತ್ಯದಿಂದ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. 

ಗುರು ಸಂಚಾರ ಬದಲಾವಣೆ: ಗುರು ಸಂಚಾರ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ತನ್ನ ಶುಭ-ಅಶುಭ ಪರಿಣಾಮವನ್ನು ಬೀರುತ್ತದೆ. ಆದರೂ 31 ಡಿಸೆಂಬರ್ 2023ರಂದು ಗುರುವಿನ ನೇರ ನಡೆಯೊಂದಿಗೆ ಕೆಲವು ರಾಶಿಯವರಿಗೆ ಗುರುಬಲ ಬರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ: ವರ್ಷಾಂತ್ಯದಲ್ಲಿ ಗುರುವಿನ ಬಲ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಈ ಸಮಯದಲ್ಲಿ ನೀವು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ವೃತ್ತಿ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಉತ್ತಮ ಆರ್ಥಿಕ ಪ್ರಯೋಜನಗಳನ್ನು ಕೂಡ ಪಡೆಯುವಿರಿ. ಬಹಳ ದಿನಗಳ ನಿಮ್ಮ ಕನಸೊಂದು ನನಸಾಗುವ ಸಾಧ್ಯತೆ ಇದೆ.  

ಸಿಂಹ ರಾಶಿ: 2023ರ ಕೊನೆಯ ತಿಂಗಳಿನಲ್ಲಿ ಗ್ರಹಗಳ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ಧನಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ನಿಮ್ಮ ಕೆಲಸ ಕಾರ್ಯಗಳಿಗೆ ಚಾಲನೆ ದೊರೆಯಲಿದ್ದು ಶೀಘ್ರದಲ್ಲೇ ಅವು ಪೂರ್ಣಗೊಳ್ಳಲಿವೆ. ಎಲೆಕ್ಟ್ರಾನಿಕ್/ ಎಲೆಕ್ಟ್ರಿಕಲ್ ಸಂಬಂಧಿತ ಕೆಲ ಮಾಡುವವರಿಗೆ ಅತ್ಯುತ್ತಮ ಸಮಯ. ವಿವಾಹ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು.   

ಧನು ರಾಶಿ: ಈ ರಾಶಿಯವರಿಗೆ ಈ ವರ್ಷಾಂತ್ಯದಲ್ಲಿ ಗುರುವಿನ ನೇರ ಚಲನೆಯು ನಿಮಗೆ ರಾಜಯೋಗವನ್ನು ನೀಡಲಿದೆ. ಗುರು ಬಲದಿಂದಾಗಿ ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣಬಹುದು. ಗುರುವಿನ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿರುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕಾಣಬಹುದು. ಒಟ್ಟಾರೆಯಾಗಿ ಈ ಸಮಯವು ನಿಮಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ ಎನ್ನಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link