Photo Gallery: ಹೈಟಿಯಲ್ಲಿ ಭೀಕರ ಭೂಕಂಪ; ಸಾವನ್ನಪ್ಪಿದವರ ಸಂಖ್ಯೆ 1,297ಕ್ಕೆ ಏರಿಕೆ..!

Mon, 16 Aug 2021-4:02 pm,

ಕೆರೆಬಿಯನ್ ನಾಡು ಹೈಟಿಯಲ್ಲಿ ಶನಿವಾರ ರಾತ್ರಿ 6 ಬಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನಕ್ಕೆ ಹೆದರಿದ ಜನರು ಮನೆಗಳು ಕುಸಿದು ಬೀಳುವ ಭಯದಿಂದ ರಸ್ತೆಗಳಲ್ಲಿ ಕಾಲ ಕಳೆದಿದ್ದಾರೆ.

ಈ ಪ್ರಬಲ ಭೂಕಂಪದ ಕೇಂದ್ರಬಿಂದು ರಾಜಧಾನಿಯಿಂದ 125 ಕಿ.ಮೀ ದೂರದಲ್ಲಿ ದಾಖಲಾಗಿತ್ತು ಎಂದು ಅಮೆರಿಕದ ಭೂ ವಿಜ್ಞಾನ ಸಂಸ್ಥೆ ತಿಳಿಸಿದೆ. ಹೈಟಿಯ ಪ್ರಧಾನಿ ಏರಿಯಲ್ ಹೆನ್ರಿ ದ್ವೀಪದಾತ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಭೂಕಂಪದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹೈಟಿಯಲ್ಲಿ 1 ತಿಂಗಳು ತುರ್ತು ಪರಿಸ್ಥಿತಿ ಹೇರುವುದುದಾಗಿ ಪ್ರಧಾನಿ ತಿಳಿಸಿದ್ದಾರೆ.

ಹೈಟಿಯಲ್ಲಿ ಸಂಭವಿಸಿರುವ ಭೀಕರ ಭೂಕಂಪಕ್ಕೆ ಇದುವರೆಗೆ 1,297 ಜನರು ಸಾವನ್ನಪ್ಪಿರುವುದು ವರದಿಯಾಗಿದೆ. ಬರೋಬ್ಬರಿ 5,700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಅಂತಾ ತಿಳಿದುಬಂದಿದೆ. ಗಾಯಾಳುಗಳನ್ನು ರಕ್ಷಿಸಲಾಗುತ್ತಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಸಾವಿರಾರು ಜನರಿಗೆ ಆಘಾತ ಉಂಟಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.   

ಹೈಟಿಯಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಘಟನೆಯಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಡೊಮಿನಿಕನ್ ರಿಪಬ್ಲಿಕ್ ಮತ್ತು ಮೆಕ್ಸಿಕೋ ಸೇರಿದಂತೆ ನೆರೆಯ ದೇಶಗಳು ಭೀಕರ ಭೂಕಂಪಕ್ಕೆ ತುತ್ತಾಗಿ ನಲುಗಿಹೋಗಿರುವ ಕೆರೆಬಿಯನ್ ದೇಶ ಹೈಟಿಗೆ ಸಹಾಯಹಸ್ತ ಚಾಚಿವೆ. ಅಗತ್ಯ ಆಹಾರ ಮತ್ತು ಔಷಧಿಗಳನ್ನು ವಿಮಾನಗಳ ಮೂಲಕ ಹೈಟಿಯ ಭೂ ಗಡಿಯುದ್ದಕ್ಕೂ ಕಳುಹಿಸುತ್ತಿವೆ. ಅಮೆರಿಕ ಕೂಡ ಪ್ರಮುಖ ಸಾಮಗ್ರಿಗಳನ್ನು ರವಾನಿಸಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link